ಲಷ್ಕರ್ ಭಯೋತ್ಪಾದಕ ಜಹುರನನ್ನು ಬಂಧಿಸಿದ ಅನಂತನಾಗ್ ಪೊಲೀಸರು.
- 18 Dec 2023 , 12:36 AM
- Jammu&Kashmir
- 143
ಜಮ್ಮು ಕಾಶ್ಮೀರ : ಜಮ್ಮು ನಗರದ ಹೊರವಲಯದಲ್ಲಿರುವ ಪಾಕಿಸ್ತಾನದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾದ ಭಯೋತ್ಪಾದಕ ಜಹೂರ್ ಅಹ್ಮದ್ನನ್ನು ಪೊಲೀಸರು ಬಂಧಿಸಿದ್ದಾರೆ.

ಜಮ್ಮು ಬಳಿಯ ಸಾಂಬಾದಿಂದ ಲಷ್ಕರ್ ಭಯೋತ್ಪಾದಕ ಜಹೂರ್ ಅಹ್ಮದ್ ರಾಥರ ನನ್ನು ಮಧ್ಯರಾತ್ರಿ ಬಂಧಿಸುವುದರೊಂದಿಗೆ ಅನಂತ್ನಾಗ್ ಪೊಲೀಸರು ಪ್ರಮುಖ ಭಯೋತ್ಪಾದಕ ಬೆದರಿಕೆಯನ್ನು ವಿಫಲಗೊಳಿಸಿದ್ದಾರೆ.

ಈ ಹಿಂದೆ ಈತ ಹಿಜ್ಬುಲ್ನಲ್ಲಿದ್ದ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ತರಬೇತಿಯನ್ನು ಪಡೆದಿದ್ದ ಎನ್ನಲಾಗಿದೆ. ಕಳೆದ ವರ್ಷ ದಕ್ಷಿಣ ಕಾಶ್ಮೀರದ ಕುಲ್ಗಾಮ್ನಲ್ಲಿ 3 ಬಿಜೆಪಿ ಕಾರ್ಯಕರ್ತರನ್ನು ಭಯೋತ್ಪಾದಕ ಜಹೂರ್ ಅಹ್ಮದ್ ಕೊಂದಿದ್ದ. ಮಧ್ಯರಾತ್ರಿ ಕಾರ್ಯಾಚರಣೆಯಲ್ಲಿ ಅನಂತ್ನಾಗ್ ಪೊಲೀಸರು ಬಂಧಿಸಿದ್ದಾರೆ ಈ ಭಯೋತ್ಪಾದಕನನ್ನು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಸಾಂಬಾ ಸೆಕ್ಟರ್‌ನಲ್ಲಿ ಬಂಧಿಸಿದ್ದಾರೆ.
ಪಾಕಿಸ್ತಾನದ ಶಸ್ತ್ರಾಸ್ತ್ರಗಳ ಸರಕನ್ನು ಸಂಗ್ರಹಿಸಲು ಭಯೋತ್ಪಾದಕ ಜಹೂರ್ ಸಾಂಬಾದಲ್ಲಿದ್ದ, ಶಸ್ತ್ರಾಸ್ತ್ರಗಳನ್ನು ಡ್ರೋನ್ ಮೂಲಕ ಸರಬರಾಜು ಮಾಡುತಿದ್ದ ಎಂದು ತಿಳಿದುಬಂದಿದೆ. ಸಾಂಬಾ ಇಂಟರ್ನ್ಯಾಷನಲ್ ಬಾರ್ಡರ್ ಶಸ್ತ್ರಾಸ್ತ್ರ ಸರಬರಾಜು ಮಾಡಲು ಪ್ರಮುಖ ಮಾರ್ಗವಾಗಿದೆ. ಅನಂತ್‌ನಾಗ್ ಪೊಲೀಸರು ಪ್ರಮುಖ ಭಯೋತ್ಪಾದಕ ಪಿತೂರಿಯನ್ನು ವಿಫಲಗೊಳಿಸಿದ್ದಾರೆ.










