ವಿಶೇಷ ಮದುವೆ ಆಮಂತ್ರಣದ ಮೂಲಕ ಎಲ್ಲರ ಗಮನ ಸೆಳೆದ ನವಜೋಡಿಗಳು

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ 100 ಹಾಗೂ 500 ಮುಖ ಬೆಲೆ ನೋಟ್ ಅಮಾನ್ಯ ಮಾಡಿದಾಗಿನಿಂದಲೂ ಕ್ರಿಯಾಶೀಲತೆ ಎನ್ನುವುದು ಇತ್ತೀಚೆಗೆ ಮದುವೆ ಆಮಂತ್ರಣದಲ್ಲಿ ಭಾರಿ ಸದ್ದು ಮಾಡುತ್ತಿದೆ. 2000 ಮುಖ ಬೆಲೆಯ ನೋಟು, ಆಧಾರ ಕಾರ್ಡ್, ದಿನಪತ್ರಿಕೆ, ಪಡಿತರ ಚೀಟಿ, ಚಿನ್ನಾಭರಣದ ಬಾಕ್ಸ್ ಸೇರಿದಂತೆ ಹಲವು ಮಾಧರಿಯ ಆಮಂತ್ರಣವನ್ನು ನಾವು ನೋಡಿದ್ದೇವೆ. ಆದರೆ ಬೆಳಗಾವಿ ನವಜೋಡಿ ಒಂದು ವಿನೂತನವಾಗಿ ಆಮಂತ್ರಣ ಪತ್ರಿಕೆ ನೀಡಿ ಮದುವೆ ಕಾರ್ಡ್ ಮಾಡಿಸಿದ್ದು ವಿಶೇಷವಾಗಿದೆ. ಹೌದು. ಬೆಳಗಾವಿಯ ಅನಗೋಳದ ರಹವಾಸಿಯಾದ ಧರ್ಮರಾಜ್ ಮತ್ತು ರೀಚಿತಾ ಮದುವೆ ಇದೇ ದಿ. ಫೆ.28ರಂದು ನಿಶ್ಚಯವಾಗಿದ್ದು, ಈ ಜೋಡಿ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಪಾಸ್ ಪೋರ್ಟ್ ಬೋರ್ಡಿಂಗ್ ಕೊಟ್ಟ ಸಂಬoಧಿಕರು ಹಾಗೂ ಸ್ನೇಹಿತರನ್ನು ಮದುವೆ ಆಹ್ವಾನಿಸುತ್ತಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದರೆ.

promotions

promotions

Read More Articles