ಇಂದು ಒಂದೇ ದಿನ 176 ಕೊರೋನಾ ಸೋಂಕು ಪತ್ತೆ
- 15 Jan 2024 , 1:26 AM
- Bengaluru
- 96
ಇಂದು ಬೆಂಗಳೂರು ನಗರದಲ್ಲಿ 42, ಉಡುಪಿ 21, ಯಾದಗಿರಿ 22, ಬೀದರ್ 20, ಕಲಬುರಗಿ ಜಿಲ್ಲೆಯಲ್ಲಿ 13 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಇಂದು ಸಂಜೆ ಬಿಡುಗಡೆಗೊಳಿಸಿದ ಹೆಲ್ತ್ ಬುಲೆಟಿನ್ ನಲ್ಲಿ ಕೊರೋನಾ ದಿಂದ ಒಂದೇ ದಿನ ಐದು ಸಾವು, 176 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.
ಇಂದು ಒಟ್ಟು 312 ಜನರು ಗುಣವಾಗಿದ್ದು. ಈ ಮೂಲಕ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 3955ಗೆ ಏರಿದ್ದು, 2956 ಆಕ್ಟಿವ್ ಕೇಸ್ ಇದೆ ಅಂತಾ ಆರೋಗ್ಯ ಇಲಾಖೆ ತಿಳಿಸಿದೆ.











