CD ವಿಚಾರ ಮುಗಿದು ಹೋದ ಅಧ್ಯಾಯ: ಶಾಸಕ ಸತೀಶ

ಗೋಕಾಕ : ರಮೇಶ್ ಜಾರಕಿಹೊಳಿ ಯಾರ ಮಾತುಗಳನ್ನು ಕೇಳುವ ಸ್ಟೇಜ್ ನಲ್ಲಿ ಇರಲಿಲ್ಲ. ಈ ಪರಿಸ್ಥಿತಿಯಲ್ಲಿ ಜಾರಕಿಹೊಳಿ ಕುಟುಂಬ ಒಂದೇ ಎಂದು ಹೇಳಿಕ್ಕೆ ಆಗಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಎಂದಿದ್ದಾರೆ. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ಗೋಕಾಕದಲ್ಲಿ ಪರಿಸ್ಥಿತಿ ಏನು ಇದೆ.

promotions

ಜಾರಕಿಹೊಳಿ ಕುಟುಂಬ ಯಾರು ನಡೆಸುತ್ತಾರೇ ಎಂಬುವುದು ಗೊತ್ತಿದೆ. ರಮೇಶ್ ವೈಯಕ್ತಿಕವಾಗಿ ಇದ್ದಾರೆ. ಅಳಿಯ ಅಂಭಿರಾವ್ ಪಾಟೀಲ ಅವರ ಮಾತು ಬಿಟ್ರೆ ಯಾರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ರಮೇಶ್ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದರು.

promotions

' ರಮೇಶ್ ಸಿಡಿ ಪ್ರಕರಣದಲ್ಲಿ ಯುವತಿ ಹೇಳಿಕೆ ಅತೀ ಮುಖ್ಯ. ಪೊಲೀಸರು ತನಿಖೆ ನಡೆಸಿ ,ಯುವತಿಗೆ ನೋಟಿಸ್ ನೀಡುವ ಮೂಲಕ ಕರೆಸಿ ವಿಚಾರಣೆ ನಡೆಸಬೇಕು. ಬೇರೆ ಯಾರೇ ದೂರು ಕೊಟ್ಟರು ಅದು ಪ್ರಯೋಜವಾಗಲ್ಲ. ಯುವತಿ ಹೇಳಿಕೆಯೇ ಪ್ರಮುಖವಾಗಿರುತ್ತದೆ' ಎಂದು ತಿಳಿಸಿದರು.

' ಪಕ್ಷ ಯಾವುದೇ ಇದ್ದರೂ ಇಂತಹ ಘಟನೆಗಳು ನಡೆಬಾರದು. ಹಾಗೇ ಏನಾದ್ರು ಇದ್ರೆ ನೇರವಾಗಿ ಪೊಲೀಸ ಠಾಣೆಗೆ ದೂರು ನೀಡಿ, ತನಿಖೆ ನಡೆಸುವಂತೆ ಆಗ್ರಹಿಸಬೇಕು. ಇದು ಉತ್ತಮ ವೇದಿಕೆಯಾಗಿದೆ. ಅದನ್ನು ಬಿಟ್ಟು ಇಂತಹ ಪ್ರಕರಣಗಳನ್ನು ರಸ್ತೆಗೆ ತರಬಾರದು' ಎಂದು ಹೇಳಿದರು. ' ಸಿಡಿ ಪ್ರಕರಣ ಮುಗಿದ ವಿಚಾರವಾಗಿದೆ. ಈಗಾಗಲೇ ರಮೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಬಂಧ ಪಟ್ಟವರಿಗೆ ಪೊಲೀಸರು ನೋಟಿಸ್ ನೀಡಿ, ತನಿಖೆ ನಡೆಸಿಬೇಕು. ಆಗ ಸತ್ಯಾಂಶ ಹೊರಬರಲಿದೆ ' ಎಂದರು.

Read More Articles