ದಾರ್ಮಿಕ ಇಲಾಖೆ ಕೈಗೊಂಡಿರುವ ನಿರ್ಣಯ ಹಿಂಪಡೆಯಲಿ: ಗೌಡಾ

ಬೆಳಗಾವಿ :ದೇವಸ್ಥಾನ ಆಡಳಿತ ಮಂಡಳಿ ನೇಮಿಸುವ ನಿರ್ಧಾರ ಮಾಡಿ 16 ದೇವಸ್ಥಾನಗಳಿಗೆ ನೋಟಿಸ್ ನೀಡಿದ್ದಾರೆ‌. ಎಷ್ಟು ಮಸೀದಿ ಹಾಗೂ ಚಚ್೯ಗಳಿಗೆ ಹೋಗಿವೆ ಎಂದು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಗುರುಪ್ರಸಾದ ಗೌಡ ಪ್ರಶ್ನಿಸಿದರು. ಶುಕ್ರವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

promotions

ಆಡಳಿತ ವ್ಯವಸ್ಥೆಯ ಹೆಸರಿನಲ್ಲಿ ಎಲ್ಲ ಕ್ಷೇತ್ರದಲ್ಲಿ ಉದ್ಯಮಗಳ ಖಾಸಗೀಕರಣಗೊಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ದೇವಸ್ಥಾನಗಳನ್ನು ಮಾತ್ರ ಸರಕಾರಿಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ‌ ಹಿಂದೆ ಮಹಾರಾಷ್ಟ್ರದಲ್ಲಿಯೂ ಈ ರೀತಿಯ ಪ್ರಯತ್ನ ನಡೆದಿತ್ತು. ಅದಕ್ಕೆ ರಾಜ್ಯದ ಎಲ್ಲ ದೇವಸ್ಥಾನ ವಿಶ್ವಸ್ಥರು ಹಾಗೂ ಧಾರ್ಮಿಕ ಸಂಸ್ಥೆಗಳು ಸಂಘಟಿತರಾಗಿ ತೀವ್ರವಾಗಿ ವಿರೋಧಿಸಿದ್ದವು.

promotions

ಆದ್ದರಿಂದ ನಾಲ್ಕುವರೆ ಲಕ್ಷ ದೇವಸ್ಥಾನಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಸರಕಾರಿಕರಣದ ನಿರ್ಧಾರವನ್ನು ಸರಕಾರ ಹಿಂಪಡೆಯಬೇಕಾಯಿತು. ಬೆಳಗಾವಿಯಲ್ಲಿಯೂ ಸಹ ದೇವಸ್ಥಾನಕ್ಕೆ ಆಡಳಿತ ಮಂಡಳಿಯ ನೇಮಿಸುವ ನಿರ್ಧಾರವನ್ನು ಧಾರ್ಮಿಕ ಇಲಾಖೆ ಹಿಂಪಡೆಯಬೇಕು ಇಲ್ಲದಿದ್ದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಶೋಕ ಚವ್ಹಾಣ ಮಾತನಾಡಿ, ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳಿಗೆ ಆಡಳಿತ ಮಂಡಳಿಯ ನೇಮಿಸುವ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು.

ದೇವಸ್ಥಾನಗಳಿಗೆ ಆಡಳಿತಗಾರರನ್ನು ನೇಮಿಸುವುದು ಇದು ದೇವಸ್ಥಾನ ಸರಕಾರಿಕರಣದ ಹುನ್ನಾರವಾಗಿದೆ. ಆದ್ದರಿಂದ ದೇವಸ್ಥಾನಗಳಿಗೆ ಆಡಳಿತ ಮಂಡಳಿ ನೇಮಿಸುವುದು ಸರಿಯಲ್ಲ ಎಂದು ಒತ್ತಾಯಿಸಿದರು. ಮಸೀದಿ ಹಾಗೂ ಚಚ್೯ಗಳನ್ನು ಬಿಟ್ಟು ಹಿಂದೂ ದೇವಸ್ಥಾನಗಳಿಗೆ ಆಡಳಿ ಮಂಡಳಿ ನೇಮಕ ಮಾಡುವ ಕುರಿತು 28 ದೇವಸ್ಥಾನಗಳಿಗೆ ನೋಟಿಸ್ ನೀಡಿದ್ದಾರೆ.

ಇದು ಹಿಂದುಗಳಿಗೆ ಮಾಡಿದ ಅಪಮಾನ. ತತಕ್ಷಣ ಇದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು. ಸುರೇಶ ಕಿತ್ತೂರು, ಬಾಲಚಂದರ ಚೌದರಿ, ವೆಂಕಟೇಶ ಹೊನ್ನಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles