ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಇದ್ದರು ಎಪಿಎಂಸಿ ಚುನಾವಣೆಯನ್ನು ತನ್ನ ಕೈ ವಶ ಮಾಡಿಕೊಳ್ಳುವಲ್ಲಿ ಬಿಜಿಪಿ ವಿಫಲವಾಗಿದೆ. ಸದ್ಯ ಎಪಿಎಂಸಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಇಂದು ನಡೆದ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಅವಿರೋಧವಾಗಿ ನಡೆದು ಕಾಂಗ್ರೆಸ್ ವಶವಾಗಿದೆ. ಅಧ್ಯಕ್ಷರಾಗಿ ಯುವರಾಜ್ ಕದಂ ಉಪಾಧ್ಯಕ್ಷರಾಗಿ ಮಹಾದೇವಿ ಖಾನಗೌಡರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಪಿಎಂಸಿ ಚುನಾವಣೆಗೆ ನಾಲ್ಕು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಒಟ್ಟು 17 ಜನ ಸದಸ್ಯತ್ವ ಬಲದ ಬೆಳಗಾವಿಯ ಎಪಿಎಂಸಿಯಲ್ಲಿ 11 ಜನ ಚುನಾಯಿತ ಪ್ರತಿನಿಧಿಗಳು ಹಾಗೂ 6 ಜನ ಸರ್ಕಾರದಿಂದ ನಾಮ ನಿರ್ದೇಶಿತ ಸದಸ್ಯರಿದ್ದಾರೆ. ಒಟ್ಟಿನಲ್ಲಿ ಎಪಿಎಂಸಿ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮೇಲುಗೈ ಸಾಧಿಸಿದ್ದಾರೆ.