ತೈಲ ಬೆಲೆಯಲ್ಲಿ ಭಾರಿ ಎರಿಕೆ

  • 15 Jan 2024 , 3:25 AM
  • Delhi
  • 102
ದೆಹಲಿ: ತೈಲ ಬೆಲೆಯೇರಿಕೆಗೆ ತಡೆಯೇ ಇಲ್ಲದಂತಾಗಿದೆ. ದಿನದಿಂದ ದಿನ್ನಕ್ಕೆ ತೈಲ ಬೆಲೆ ಯೆರುತ್ತಲೇ ಇದೇ . ಕೊರೋನಾ ಲಾಕ್ ಡೌನ್ ಕಾರಣ ಸತತ 3 ತಿಂಗಳಿಂದ ತೈಲ ಉದ್ಯಮವನ್ನು ಸರ್ಕಾರ ಬಂದ ಮಾಡಲಾಗಿತ್ತು ಇದರ ಎಪೆಕ್ಟ ಇಡೀ ದೇಶಕ್ಕೆ ತಟ್ಟಿದೆ. ದೈನಂದಿನ ಬೆಲೆ ಪರಿಷ್ಕರಣೆಯನ್ನು ಸರಕಾರಿ ತೈಲ ಕಂಪೆನಿಗಳು ನಿಲ್ಲಿಸಿದ್ದವು . ಕೆಲವು ದಿನಗಳ ಹಿಂದೆ ಯಷ್ಟೇ ಜೂ .7 ರಿಂದ ಈ ಪ್ರಕ್ರಿಯೆ ಶುರು ಮಾಡಿದ ಅನಂತರ ದಿನದಿಂದ ದಿನಕ್ಕೆ ಬೆಲೆ ಏರುತ್ತಲೇ ಇದೆ‌‌. ಸತತ 9 ನೇ ದಿನವು ತೈಲ ದರದಲ್ಲಿ ಏರಿಕೆ ಮುಂದುವರಿದಿದೆ . ಪೆಟ್ರೋಲ್ ಬೆಲೆ ದಿಲ್ಲಿಯಲ್ಲಿ ಲೀ.ಗೆ 48 , ಡೀಸೆಲ್ ಲೀ.ಗೆ 59 ಪೈಸೆ ಹೆಚ್ಚಳವಾಗಿದೆ . ಇದರ ಪರಿಣಾಮ ಬೆಂಗಳೂರಿನಲ್ಲಿ ಸೋಮವಾರ ಪೆಟ್ರೋಲ್ ಬೆಲೆ ಲೀ.ಗೆ 78.73 ರೂ.ಗೇರಿದೆ ಹಾಗೂ ಡೀಸೆಲ್ ಬೆಲೆ 70.95 ರೂ.ಗೆ ಮುಟ್ಟಿದೆ . ಅಲ್ಲಿಗೆ ಎರಡೂ ತೈಲಗಳ ಬೆಲೆಯಲ್ಲಿ 5 ರೂ . ಹೆಚ್ಚಳವಾಗಿದೆ . ಬಹುಶಃ ಇಲ್ಲಿಗೆ ಬೆಲೆಯೇರಿಕೆ ನಿಲ್ಲಬಹುದೆಂದು ಅಂದಾಜಿಸಲಾಗಿದೆ . ಕೊರೋನಾ ಲಾಕಡೌನ್ ನಿಂದಾಗಿ ತೈಲೊದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಂತ್ತಾಗಿದೆ.

promotions

Read More Articles