ಮತ್ತೊಂದು ಸಿಡಿ ಬಿಡುಗಡೆ ಮಾಡಿದ ಸಿಡಿ ಲೇಡಿ

ಬೆಂಗಳೂರು :ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿದ್ದಾಳೆ ಎನ್ನಲಾದ ಯುವತಿ ಮತ್ತೊಂದು ವಿಡೀಯೋ ಮಾಡಿ ಹೊರಗೆ ಬಿಟ್ಟಿದ್ದಾಳೆ. ಇದರಲ್ಲಿ 2-3 ಸ್ಫೋಟಕ ಅಂಶಗಳನ್ನು ಪ್ರಸ್ತಾಪಿಸಿದ್ದಾಳೆ.

promotions

ನನ್ನ ಅಪ್ಪ, ಅಮ್ಮ ಸ್ವ ಇಚ್ಛೆಯಿಂದ ಪೊಲೀಸ್ ದೂರು ನೀಡಿಲ್ಲ. ನಾನು ತಪ್ಪು ಮಾಡಿಲ್ಲ ಎಂದು ಅವರಿಗೆ ಗೊತ್ತಿದೆ. ಹಾಗಾಗಿ ಅವರು ಸ್ವಇಚ್ಛೆಯಿಂದ ದೂರು ನೀಡಲು ಸಾಧ್ಯವೇ ಇಲ್ಲ ಎಂದಿದ್ದಾಳೆ. ನನಗೆ ನನ್ನ ಅಪ್ಪ, ಅಮ್ಮನ ಸೇಫ್ಟಿ ಮುಖ್ಯ.

promotions

ಅವರು ಸೇಫಾಗಿದ್ದಾರೆ ಎಂದು ಗೊತ್ತಾದ ತಕ್ಷಣ ನಾನು ಹೊರಗೆ ಬಂದು ಎಸ್ಐಟಿ ಮುಂದೆ ಹಾಜರಾಗಿ ಎಲ್ಲ ಹೇಳಿಕೆ ನೀಡುತ್ತೇನೆ ಎಂದಿದ್ದಾಳೆ.

ಜೊತೆಗೆ ನನ್ನ ಅಪ್ಪ, ಅಮ್ಮನಿಗೆ ಸೇಫಾಗಿರುವಂತೆ ನೋಡಿಕೊಳ್ಳಿ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಮತ್ತು ರಮೇಶ ಕುಮಾರ್ ಹಾಗೂ ಮಹಿಳೆ ಸಂಘಟನೆಗಳ ಬಳಿ ವಿನಂತಿಸಿಕೊಂಡಿದ್ದಾಳೆ.

Read More Articles