ಗೋಕಾಕ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಪ್ರಚಾರ
- 14 Jan 2024 , 11:44 PM
- Belagavi
- 107
ಗೋಕಾಕ: ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಗೋಕಾಕ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರ ಪರ ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದು ತುರುಸಿನ ಪ್ರಚಾರ ನಡೆಸಿದರು.

ಕಡಬಗಟ್ಟಿ, ಕನಸಗೇರಿ, ತವಗ, ಕೈತನಾಳ, ಕೈಹೊಸೂರ ಗ್ರಾಮಗಳಲ್ಲಿ ಪ್ರಿಯಾಂಕಾ ಅವರು ಮನೆಮನೆಗೆ ಭೇಟಿ ನೀಡಿ ಮತಯಾಚಿಸಿದರು. "ತಂದೆ ಸತೀಶ ಜಾರಕಿಹೊಳಿ ಅವರಿಗೆ ತಮ್ಮ ಅತ್ಯಮೂಲ್ಯವಾದ ಮತ ನೀಡಿ, ಗೆಲ್ಲಿಸುವಂತೆ ಮನವಿ ಮಾಡಿದರು. ಸುಡುವ ಬಿಸಿಲನ್ನೂ ಲೆಕ್ಕಿಸದೇ ಪ್ರಿಯಾಂಕಾ ಅವರು ಲವಲವಿಕೆಯಿಂದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

ಎಲ್ಲ ಗ್ರಾಮಗಳಲ್ಲೂ ಮತದಾರರು ಅವರನ್ನು ಆರುತಿ ಮಾಡಿ, ಆತ್ಮೀಯತೆಯಿಂದ ಬರಮಾಡಿಕೊಂಡರು. ಪ್ರಿಯಾಂಕಾ ಅವರನ್ನು ಕಾರ್ಯಕರ್ತರು ಹಾಗೂ ಮುಖಂಡರು ಸನ್ಮಾನಿಸಿದರು.










