ಡೈನಾಮಿಕ್ ಪ್ರಿನ್ಸ್ ದಂಪತಿಗೆ ಕೊರೋನಾ ಪಾಸಿಟಿವ
- 15 Jan 2024 , 3:35 AM
- Bengaluru
- 111
ಬೆಂಗಳೂರು: ಸ್ಯಾಂಡಲ್‌ವುಡ್ ಡೈನಾಮಿಕ್ ಪ್ರಿನ್ಸ್, ಚಾಕೋಲೆಟ್ ಬಾಯ್ ಪ್ರಜ್ವಲ್ ದೇವರಾಜ್ ಹಾಗೂ ಪತ್ನಿ ರಾಗಿಣಿಗೆ ಕೊರೋನಾ ಪಾಸಿಟಿವ ದೃಢವಾಗಿದೆ. ತಮಗೆ ಹಾಗೂ ಪತ್ನಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿರುವುದನ್ನು ಪ್ರಜ್ವಲ್ ದೇವರಾಜ್ ಟ್ವಿಟ್ಟರ್ ಮೂಲಕ ಖಚಿತ ಪಡಿಸಿದ್ದಾರೆ. ರಾಗಿಣಿ ಮತ್ತು ನನಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಅಗತ್ಯ ಔಷಧಿ ಹಾಗೂ ವಿಶ್ರಾಂತಿಯನ್ನು ನಾವು ಪಡೆಯುತ್ತಿದ್ದೇವೆ. ನಾವಿಬ್ಬರೂ ಇದರಿಂದ ಹೊರಗೆ ಬರುತ್ತೇವೆ. ನಿಮ್ಮ ಪ್ರೀತಿ ಹಾಗೂ ಕಾಳಜಿಗೆ ಧನ್ಯವಾದಗಳು ಎಂದು ನಟ ಪ್ರಜ್ವಲ್ ದೇವರಾಜ್ ಟ್ವೀಟ್ ಮಾಡಿದ್ದಾರೆ.












