ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸತೀಶ್ ಜಾರಕಿಹೊಳಿ ಬೆಂಬಲಿಸಿ - ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ :ಕಾಂಗ್ರೆಸ್ ಪಕ್ಷವು ಬಡವರ, ಶ್ರಮಿಕರ ಹಾಗೂ ನಿರ್ಗತಿಕರ ಪಕ್ಷವಾಗಿ ಹೊರಹೊಮ್ಮಿದ್ದು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕಾರ್ಯರೂಪಕ್ಕೆ ತಂದಿದೆ, ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಹಲವಾರು ದಿಟ್ಟ ನಾಯಕರನ್ನು ಹೊಂದಿದ್ದು, ಅದರಲ್ಲಿ ಸತೀಶ್ ಜಾರಕಿಹೊಳಿ ಕೂಡ ಒಬ್ಬರು ಎಂದು ಶಾಸಕರೂ, ಕೆಪಿಸಿಸಿ ವಕ್ತಾರರೂ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. ಶುಕ್ರವಾರ ಹಿರೇಬಾಗೇವಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಜನಪ್ರತಿನಿಧಿಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಬರಲಿರುವ ಲೋಕಸಭಾ ಉಪ ಚುನಾವಣೆಯ ಸಭೆ ನಡೆಸಿ ಸತೀಶಣ್ಣಾ ಜಾರಕಿಹೊಳಿಯವರ ಪರವಾಗಿ ಮತ ಯಾಚಿಸಿ ಅವರು ಮಾತನಾಡಿದರು.

promotions

ಸತೀಶ್ ಜಾರಕಿಹೊಳಿ ತಮ್ಮ ಘನತೆ, ಗೌರವಗಳೊಂದಿಗೆ ಪಕ್ಷವನ್ನು ಕೆಳಮಟ್ಟದಿಂದ ಸಂಘಟಿಸಿ, ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ್ದಾರೆ. ಇಂತಹ ಗೌರವವುಳ್ಳ ವ್ಯಕ್ತಿಗೆ ತಮ್ಮ ಅತ್ಯಮೂಲ್ಯ ಮತವನ್ನು ನೀಡಿ ಸಂಸದರನ್ನಾಗಿಸುವ ಮುಖಾಂತರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಕೆಲಸಗಳಿಗಾಗಿ ಬೆಂಬಲಿಸಿ ಅವರ ಕೈಗಳನ್ನು ಮತ್ತಷ್ಟು ಬಲಪಡಿಸೋಣ ಹಾಗೂ ನಮ್ಮೆಲ್ಲರ ಕೂಗನ್ನು ದಿಲ್ಲಿಯವರೆಗೆ ಮುಟ್ಟಿಸೋಣ ಎಂದು ಅವರು ಹೇಳಿದರು.

promotions

Read More Articles