ಆರ್ ಸಿ ಬಿ ‌ ಕೊರೋನಾಘಾತ: ಪಡಿಕ್ಕಲ್ ಗೆ ಕೊರೋನಾ ಸೋಂಕು ದೃಢ

ಚೆನ್ನೈ: ರಾಯಲ್ ಚ್ಯಾಲೆಂಜರ‍್ಸ ಬೆಂಗಳೂರು ತಂಡದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಗೆ ಕೋವಿಡ್-19 ಪಾಸಿಟಿವ್ ದೃಢ ಪಟ್ಟಿದ್ದು, ಆಟಗಾರನನ್ನು ಉಳಿದ ಆಟಗಾರರಿಂದ ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಪಡಿಕ್ಕಲ್ ಕಳೆದ ಆವೃತ್ತಿಯಲ್ಲಿ ಆರ್ ಸಿಬಿಯ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದರು.

promotions

ಟಾಪ್ ಆರ್ಡರ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆರ್ ಸಿಬಿ ಪ್ಲೇ ಆಫ್ ತಲುಪುವಂತೆ ಮಾಡುವಲ್ಲಿ ಪಡಿಕ್ಕಲ್ ಅವರ ಪಾತ್ರ ದೊಡ್ಡದಿದೆ. ಅವರ ಅಲಭ್ಯ ಆರ್ ಸಿಬಿಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಪಡಿಕ್ಕಲ್ ಕ್ವಾರಂಟೈನ್ ನಲ್ಲಿರುವುದರಿಂದ ಏ.9 ರಂದು ನಡೆಯಲಿರುವ   ಉದ್ಘಾಟನಾ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.

promotions

ಪಡಿಕ್ಕಲ್ ಗೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ಆಟಗಾರ ನಿತಿತ್ ರಾಣಾ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನ ಅಕ್ಷರ್ ಪಟೇಲ್ ಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು.

Read More Articles