ಡಿಕೆ ಬ್ರದರ್ಸಗೆ ಸಚಿವ ಜಗದೀಶ ಶೆಟ್ಟರ್ ಸವಾಲ್
- 18 Dec 2023 , 12:00 AM
- Belagavi
- 127
ಬೆಳಗಾವಿ: ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ನಗರದ ಧರ್ಮನಾಥ ಭವನದಲ್ಲಿ ಬಿಜೆಪಿ ಪ್ರಚಾರಾರ್ಥ ಸಭೆ ಉದ್ದೇಶಿಸಿ ಮಾತನಾಡಿದ ಸಚಿವ ಜಗದೀಶ್ ಶಟ್ಟರ್ ಕೊರೊನಾ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿ ದಿ.ಸುರೇಶ್ ಅಂಗಡಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.

ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವರಾಗಿದ್ದ ವೇಳೆಯಲ್ಲಿ ಈ ಭಾಗಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬೆಳಗಾವಿ ನಗರವನ್ನು ಸ್ಮಾರ್ಟ್ ಸಿಟಿ ಮಾಡಬೇಕು ಎನ್ನುವುದು ಸುರೇಶ್ ಅಂಗಡಿ ಅವರ ಕನಸು ಆಗಿತ್ತು.ದಿ. ಸುರೇಶ್ ಅಂಗಡಿ ಕನಸು ನನಸು ಮಾಡಬೇಕಾದರೆ ಮಂಗಳಾ ಅಂಗಡಿಯನ್ನು ಆಯ್ಕೆ ಮಾಡಿ ಎಂದು ವಿನಂತಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಬಂಡೆ ಪುಡಿಪುಡಿಯಾಗುತ್ತೆ. ಡಿ.ಕೆ ಸುರೇಶ್ ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾದ್ಯವಿಲ್ಲ ಎಂದು ಡಿ.ಕೆ ಬ್ರದರ್ಸ್ ಗೆ ಸವಾಲು ಹಾಕಿದ ಸಚಿವ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ದೇಶಗಳಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತೆ. ಕಾಂಗ್ರೆಸ್ ಪಕ್ಷ ಒಡದ ಮನೆಯಾಗಿದೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಮದ್ಯ ಮುಸುಕಿನ ಗುದ್ದಾಟ ನಡೆಯುತ್ತಿದೆ. ಕಾಂಗ್ರೆಸ್ ತಮ್ಮ ಸಿಎಂ ಅಭ್ಯರ್ಥಿ ಯಾರು ಎಂದು ಬಹಿರಂಗ ಪಡಿಸಲಿ ಎಂದು ಹೇಳಿದರು.










