ಸುರೇಶ ಅಂಗಡಿ ಅವರನ್ನು ಗೆಲ್ಲಿಸಿದಂತೆ ಮಂಗಲ ಅಂಗಡಿ ಅವರನ್ನು ಗೆಲ್ಲಿಸಿ; ಶಾಸಕ ಅನಿಲ್ ಬೆನಕೆ
- 15 Jan 2024 , 1:14 AM
- Belagavi
- 90
ಬೆಳಗಾವಿ:ಲೋಕಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತಿದೆ ಕೈ ಅಭ್ಯರ್ಥಿಯನ್ನು ಹಣೆಯಲು ಕಮಲ ನಾಯಕರು ಒಂದಾಗಿದ್ದಾರೆ ನಗರದ ಧರ್ಮನಾಥ ಭವನದಲ್ಲಿ ನಡೆದ ಪ್ರಚಾರರ್ಥ ಸಭೆಯಲ್ಲಿ ಮಾತನಾಡಿದ ಶಾಸಕ ಅನಿಲ್ ಬೆನಕೆ 50000 ಸಾವಿರ ಲೀಡ್ ನೀಡಿ ಮಂಗಲ ಅಂಗಡಿ ಅವರು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ 25000 ಲೀಡ್ ಇತ್ತು ಆದರೆ ಈ ಬಾರಿ ಅದಕ್ಕಿಂತಲೂ ಹೆಚ್ಚು ಲೀಡ್ ಪಡೆಯುತ್ತಾರೆ. ಮಂಗಲ ಅಂಗಡಿ ಗೆಲುವಿಗೆ ನರೇಂದ್ರ ಮೋದಿ ಅವರ ಅಭಿವೃದ್ಧಿಪರ ಕೆಲಸಗಳೇ ಸಾಕ್ಷಿ ಎಂದು ಹೇಳಿ ಮನೆ ಮನೆಗೆ ತೆರಳಿ ಕಾರ್ಯಕರ್ತರು ಹಗಲಿರುಳು ಪ್ರಚಾರ ಮಾಡಬೇಕು. ಸುರೇಶ ಅಂಗಡಿ ಅವರನ್ನು ಗೆಲ್ಲಿಸಿದಂತೆ ಮಂಗಲ ಅಂಗಡಿ ಅವರನ್ನು ಗೆಲ್ಲಿಸಬೇಕು ಎಂದು ಶಾಸಕ ಅನಿಲ್ ಬೆನಕೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.











