ಬೆಳಗಾವಿಯಲ್ಲಿ ಬಿಜೆಪಿ ಭವಿಷ್ಯ ನುಡಿದ ಅರುಣ್ ಸಿಂಗ್

ಬೆಳಗಾವಿ: ದೇಶದ ಐದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆ ಆಸ್ಸಾಂನಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪಶ್ಚಿಮ ಬಂಗಾಲದಲ್ಲಿ 200 ಸೀಟ್ ಬಿಜೆಪಿ ಗೆದ್ದು, ಅಲ್ಲಿ ಕೂಡಾ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಬೆಳಗಾವಿಯಲ್ಲಿ ಭವಿಷ್ಯ ನುಡಿದಿದ್ದಾರೆ. ಲೋಕಸಭೆ ಉಪ ಚುನಾವಣೆ ಹಿನ್ನೆಲೆ ನಗರದ ಖಾಸಗಿ ಹೊಟೇಲನಲ್ಲಿ ಸುದ್ದಿಗೋಷ್ಠಿ ನಡೆಸಿದ ಅರುಣ ಸಿಂಗ್ ತಮಿಳುನಾಡು, ಪುದುಚೇರಿ ಯಲ್ಲಿ ಎನಡಿಎ ಸರ್ಕಾರ ಬರಲಿದೆ ಕೇರಳದಲ್ಲೂ ಬಿಜೆಪಿ ಹೆಚ್ಚಿನ ಯಶಸ್ಸು ಸಿಗಲಿದೆ ಎಂದು ಹೇಳಿ ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಮೊದಲಿಗಿಂತ ಅಧಿಕ ಮತಗಳಿಂದ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

promotions

ಸತೀಶ್ ಜಾರಕಿಹೊಳಿ ಬಗ್ಗೆ ಅರುಣ್ ಸಿಂಗ್ ಏನು ಹೇಳಿದ್ರು ?

promotions

ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ‌ ನಿರಂತರವಾಗಿ ಭಾರತೀಯ ಸಂಸ್ಕೃತಿ, ಸಭ್ಯತೆಯನ್ನ ಅವಮಾನ ಮಾಡುತ್ತಿದ್ದಾರೆ ಹಿಂದುಗಳನ್ನ ನಿರಂತರವಾಗಿ ಅವಮಾನ ಮಾಡುತ್ತಿದ್ದಾರೆ ಹಾಗು ಕಾಂಗ್ರೆಸ್ ನಾಯಕತ್ವ ವಿಫಲವಾಗಿದೆ, ರಾಹುಲ್ ಗಾಂಧಿ ನಾಯಕತ್ವ ವಿಫಲವಾಗಿದೆ, ರಾಹುಲ ಗಾಂಧಿ ಮೇಲೆ ಕಾಂಗ್ರೆಸ್ ನಾಯಕರಿಗೂ ಭರವಸೆ ಇಲ್ಲ ಎಂದು ಕೈ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು ಕಾಂಗ್ರೆಸ್ ಪಥ ಅಭಿವೃದ್ಧಿಯತ್ತ ಇಲ್ಲ ಕಾಂಗ್ರೆಸ್ ವಿನಾಶದತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ. ದಿ.ಸುರೇಶ್ ಅಂಗಡಿ ರೈಲ್ವೆ ಸಚಿವರಾಗಿ ದೇಶದ ಮೂಲೆ ಮೂಲೆಗೆ ಹೋಗಿ ಪಕ್ಷದ ಕೆಲಸವನ್ನ ಮಾಡಿದ್ದಾರೆ ಕುಂದಾನಗರಿ ಬೆಳಗಾವಿಯಿಂದ ಐಟಿ ಸಿಟಿ ಬೆಂಗಳೂರಿಗೆ ವಿಶೇಷ ರೈಲು ಆರಂಭಿಸಿದ ಅವರು ಸ್ಮಾರ್ಟ್ ಸಿಟಿ, ಅಮೃತ ಸಿಟಿ ಘೋಷಣೆಯಲ್ಲಿ ಸುರೇಶ ಅಂಗಡಿ ಪ್ರಯತ್ನವಿದೆ ಎಂದು ಸುರೇಶ ಅಂಗಡಿ ಅವರನ್ನು ನೆನೆದರು.

ರಾಜ್ಯದಲ್ಲಿ ರಾಜಾಹುಲಿ ಸರ್ಕಾರವಿದೇ

ರೈತರ ಪರವಾಗಿ ಸಿಎಂ ಯಡಿಯೂರಪ್ಪ ಜನಪರ ಬಜೆಟ ನೀಡಿದ್ದಾರೆ ಎಂದು ಹೇಳಿ. ರೈಲ್ವೆ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ ಅನುದಾನ ನೀಡಲಾಗಿದೆ. ರಾಜ್ಯಸ್ಥಾನ ಅಪರಾಧದಲ್ಲಿ ನಂಬರ ಒನ್ ಸ್ಥಾನಕ್ಕೆ ಬಂದಿದೆ, ಅದೇ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ, ಸುರೇಶ್ ಅಂಗಡಿ ಅವರ ಅಭಿವೃದ್ಧಿ ಕಾರ್ಯವನ್ನ ಮಂಗಲ ಅಂಗಡಿ ಮುಂದುರೆಸಿಕೊಂಡು ಹೋಗಲಿದ್ದಾರೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಚಿವರಾದ ಉಮೇಶ ಕತ್ತಿ, ಶ್ರೀಮಂತ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More Articles