ಸುಮಿತ್ರಾ ಭಾವೆ ವಿದಿವಶ
- 15 Jan 2024 , 2:48 AM
- Delhi
- 171
ನವದೆಹಲಿ: ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕಿ ಮತ್ತು ಬರಹಗಾರ್ತಿ ಸುಮಿತ್ರಾ ಭಾವೆ ಇಂದು ತಮ್ಮ 78ನೇ ವಯಸ್ಸಿನಲ್ಲಿ ಪುಣೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುಮಿತ್ರಾ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.


ಸುಮಿತ್ರಾ ಭಾವೆ ವಾಸ್ತುಪುರುಶ್, ಕಾಸವ್, ಸಂಹಿತಾ, ಅಸ್ತು ಮತ್ತು ದೇವ್ರೈ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮರಾಠಿ ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ಸುಮಿತ್ರಾ ಭಾವೆ ಅವರಿಗೆ ಸಲ್ಲುತ್ತದೆ.











