ವೀಕೆಂಡ್ ಕರ್ಫ್ಯೂಗೆ ಸಂಪೂರ್ಣ ಸ್ಥಬ್ದವಾದ ಬೆಳಗಾವಿ ನಗರ

ಬೆಳಗಾವಿ: ಕೊರೊನಾ ಸೋಂಕಿನ 2.0 ಅಲೆ ನಿಯಂತ್ರಣಕ್ಕೆ ಸಿಗದೇ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ನೈಟ್​ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಘೋಷಿಸಿದೆ. ಅದರಂತೆ ನಿನ್ನೆ ರಾತ್ರಿ 9 ಗಂಟೆಯಿಂದ ನಗರದಲ್ಲಿ ಎಲ್ಲವೂ ಸಂಪೂರ್ಣ ಬಂದ್ ಆಗಿದ್ದು, ಈ ಒಂದು ಕಟ್ಟುನಿಟ್ಟಿನ ಆದೇಶ ಸೋಮವಾರ (ಏಪ್ರಿಲ್ 26) ಮುಂಜಾನೆಯ ತನಕ ಚಾಲ್ತಿಯಲ್ಲಿರಲಿದೆ.

promotions
logintomyvoice

ಈಗಾಗಲೇ ಸರ್ಕಾರದ ಆದೇಶ ಎಲ್ಲರ ಗಮನದಲ್ಲಿ ಇರುವುದರಿಂದ ಬೆಳಗ್ಗೆಯಿಂದ ನಗರದಲ್ಲಿ ಎಲ್ಲವೂ ಸಂಪೂರ್ಣ ಲಾಕ್ ಆಗಿದೆ.

promotions

ಸರ್ಕಾರದ ಆದೇಶದಂತೆ ಅಗತ್ಯ ಸೇವೆಗಳು ಹೊರತು ಪಡಿಸಿ ಇನ್ನುಳಿದ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ, ವಾಹನ ಸಂಖ್ಯೆಯೂ ತುಂಬಾ ವಿರಳವಾಗಿದೆ, ಜನರು ಮನೆಯಿಂದ ಹೊರಕ್ಕೆ ಬರಲು ಕೂಡ ಬಯಬೀತರಾಗಿದ್ದರೆ.

logintomyvoice

ನಗರದಲ್ಲೇಡೆ ಪೊಲೀಸ್ ಬ್ಯಾರಿಕೇಡ್ ಹಾಕಿ ಸರ್ಪಗಾವಲಿಂತೆ ಕಾಯ್ತಾಯಿದ್ದರೆ, ನಗರದ ಬೀದಿ ಬೀದಿಗಳಲ್ಲಿ ಸಂಚರಿಸುತ್ತಾ ಕೊರೋನಾ ಕರ್ಪ್ಯೂ ಬಗ್ಗೆ ಧ್ವನಿ ವರ್ಧಕ ಮೂಲಕ ಎಚ್ಚರಿಕೆ ನೀಡುತ್ತಿದ್ದರೆ, ಇನ್ನೂ ಬೇಕಾಬಿಟ್ಟಿ ಓಡಾಡುವವರಿಗೆ ಪೊಲೀಸ್ ಅಧಿಕಾರಿಗಳು ತಮ್ಮದೇ ಶೈಲಿಯಲ್ಲಿ ಎಚ್ಚರಿಕೆಯನ್ನು ಕೂಡಾ ನಿಡ್ತಾಯಿದ್ದಾರೆ.

ಒಟ್ಟಿನಲ್ಲಿ ಹೇಳುವುದಾದರೆ ಬೆಳಗಾವಿಯ ಜನತೆ ಸರ್ಕಾರದ ಆದೇಶದಕ್ಕೆ ಸಂಪೂರ್ಣ ಮನ್ನಣೆ ನೀಡುತ್ತಾ ಕೋರೋನಾ ಹೋಗಲಾಡಿಸಲು ಸಜ್ಜಾಗಿ ನಿಂತಿದ್ದಾರೆ ಎಂದು ಹೇಳಬಹುದು.

Read More Articles