ಅಗತ್ಯ ವಸ್ತು ಬಿಟ್ಟು ಲಾಕ್ ಆದ ಬೆಳಗಾವಿ

ಬೆಳಗಾವಿ : ಕೊರೋನಾ ಎರಡನೇಯ ಅಲೆ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕಫ್ರ್ಯೂಗೆ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಸೇರಿದಂತೆ ಇನ್ನಿತರ ಯಾವುದೇ ಚಟುವಟಿಕೆಗಳನ್ನು ನಡೆಸದೆ ಸಂಪೂರ್ಣ ಕಡಿವಾಣ ಹಾಕಲಾಗಿತ್ತು. ಈಗಾಗಲೇ ಸರಕಾರ ಕಳೆದ‌ ಮೂರು ದಿನಗಳ ಹಿಂದೆಯೇ ಘೋಷಣೆ ಮಾಡಿದ‌ ಹಿನ್ನೆಲೆಯಲ್ಲಿ ಸಾರ್ವಜನಿಕರು, ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಜಿಲ್ಲಾಡಳಿತಕ್ಕೆ ಸ್ಪಂದಿಸಿದರು. ಅಗತ್ಯ ವಸ್ತುಗಳಾದ ಹಾಲು, ತರಕಾರಿ,‌ ಮಟನ್, ಚಿಕನ್ ಮಾರಾಟಕ್ಕೆ ಬೆಳಗ್ಗೆ 10ರವರೆಗೆ ಅವಕಾಶ ನೀಡಲಾಗಿತ್ತು. ಬಳಿಕ ಔಷಧಿ ಅಂಗಡಿ ಹಾಗೂ ಕಟ್ಟದ ಕಾರ್ಮಿಕರಿಗೆ ಅವಕಾಶ ನೀಡಲಾಗಿತ್ತು.

promotions

promotions

Read More Articles