ಕೋವಿಡ ಗೆ ಬಲಿಯಾದ ಕಾಂಗ್ರೆಸ್ ಶಾಸಕಿ
- 15 Jan 2024 , 2:39 AM
- madyapradesh
- 122
ಭೋಪಾಲ್: ಮಧ್ಯಪ್ರದೇಶ ರಾಜ್ಯದ ಕಾಂಗ್ರೆಸ್ ಶಾಸಕಿ ಒಬ್ಬರು ಕೋವಿಡಗೆ ಬಲಿಯಾಗಿದ್ದಾರೆ. ಅಲಿರಾಜಪುರ ಜಿಲ್ಲೆಯ ಜೋಬಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಆಗಿರುವ ಕಲಾವತಿ ಭೂರಿಯಾ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕಳೆದ 10 ದಿನಗಳ ಹಿಂದೆ ಕಲಾವತಿ ಅವರಿಗೆ ಸೋಂಕು ದೃಢಪಟ್ಟಿತ್ತು. ಅಂದಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೇ ಸಾವನ್ನಪ್ಪಿದ್ದಾರೆ.












