ನಟಿ ಮಾಲಾಶ್ರೀ ಪತಿ ಕೊರೋನಾಗೆ ಬಲಿ
- 15 Jan 2024 , 1:43 AM
- Bengaluru
- 137
ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀಯ ಪತಿ ರಾಮು (52) ಕೊರೋನಾಗೆ ಬಲಿ ಆಗಿದ್ದಾರೆ. ಒಂದು ವಾರದಿಂದ ಉಸಿರಾಟದ ತೊಂದ್ರೆಯಿಂದ ಬಳಲುತಿದ್ದ ಅವರು ಇಂದು ಎಂ,ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲೇ ಕೋಟಿ ರಾಮು ಎಂದೇ ಹೆಸರುವಾಸಿಯಾಗಿದ್ದ ಇವರು AK 47, ಕಲಾಸಿಪಾಳ್ಯ, ದುರ್ಗಿ, ಚಾಮುಂಡಿ, ಲಾಕಪ್ ಡೆತ್, ಗೋಲಿಬಾರ್ ಸೇರಿದಂತೆ ಹಲವಾರು ಹಿಟ್ ಸಿನೆಮಾಗಳ ನಿರ್ಮಾಣ ಮಾಡಿದ್ದರು.ಇವರ ನಿಧನದಿಂದ ಸ್ಯಾಂಡಲ್ ವುಡ್ ಕಂಬಿನಿ ಮಿಡಿದಿದೆ.












