ಕೋರೊನಾ ಹೊಡೆತಕ್ಕೆ ಕರುನಾಡು ಸ್ತಬ್ಧ
- 30 Dec 2023 , 7:12 PM
- Bengaluru
- 123
ಬೆಂಗಳೂರು: ಕಿಲ್ಲರ್ ಕೋರೊನಾ ಹೊಡೆತಕ್ಕೆ ಕರುನಾಡು ಸ್ತಬ್ಧವಾಗುತ್ತಿದೆ. ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಗೆ ಕೌಂಟ್ ಶುರುವಾಗಿದೆ. ಕೋವಿಡ್ ಕರ್ಪ್ಯು ಹೆಸರಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿದ್ದು ಇಂದು ರಾತ್ರಿ 9 ರಿಂದ ಮೇ 10ರ ವರೆಗೆ ಕರ್ನಾಟಕ ಸಂಪೂರ್ಣ ಸ್ತಬ್ಧವಾಗಲಿದೆ. ಹಾಗಾದ್ರೆ ಈ ಲಾಕ್ ಡೌನ್ ವೇಳೆಯಲ್ಲಿ ಏನಿರುತ್ತೆ ? ಎನಿರೋಲ್ಲ ? ಎಂಬುದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ ನೋಡಿ.

ಹಾಗಾದ್ರೆ ಏನಿರುತ್ತೆ?
1) ಮೆಡಿಕಲ್ ಶಾಪ್

2) ಬ್ಯಾಂಕ್, ಎಟಿಎಂ ಸೇವೆ
3) ರಕ್ತನಿಧಿ ಕೇಂದ್ರ
4) ಆಸ್ಪತ್ರೆ
5) ಕ್ಲಿನಿಕ್‌ಗಳು
6) ಮೆಡಿಕಲ್ ಸರ್ವೀಸ್
7) ಕೃಷಿ ಚಟುವಟಿಕೆ
8) ಕಟ್ಟಡ ನಿರ್ಮಾಣ ಕಾರ್ಯಗಳು ನಡೆಯುತ್ತವೆ
9) ಮ್ಯಾನೇಜಿಂಗ್ ಸೆಕ್ಟರ್, ಕೃಷಿ ಇಲಾಖೆ ಕಾರ್ಯಗಳು
10) ಸರಕು ಸಾಗಾಣಿಕೆ ವಾಹನಗಳ ಓಡಾಟ
11) ಮದ್ಯ ಪಾರ್ಸಲ್ ಗೆ ಅವಕಾಶ
12) ಬಾರ್, ದಿನಸಿ ಅಂಗಡಿ (ನಿಗದಿತ ಸಮಯದಲ್ಲಿ ತೆರೆಯಲು ಅವಕಾಶ, ಬೆಳಗ್ಗೆ 6ರಿಂದ 10ರ ತನಕ ಅವಕಾಶ)
ಹಾಗಾದ್ರೆ ಏನಿರಲ್ಲ?
* ಸಾರಿಗೆ ವ್ಯವಸ್ಥೆ ಇರಲ್ಲ
* ಸ್ವಿಮ್ಮಿಂಗ್ ಫೂಲ್, ಜಿಮ್, ಕೋಚಿಂಗ್ ಸೆಂಟರ್ ಇರಲ್ಲ
* ಬಾರ್ ಮತ್ತು ರೆಸ್ಟೋರೆಂಟ್ ಇರಲ್ಲ
* ಪ್ರವಾಸಿ ತಾಣ ಬಂದ್
* ಶಾಪಿಂಗ್ ಮಾಲ್ ಬಂದ್
* ಗಾರ್ಮೆಂಟ್ಸ್ ಕಾರ್ಯನಿರ್ವಹಣೆಗೆ ಅವಕಾಶ ಇಲ್ಲ
* ಶಾಲಾ-ಕಾಲೇಜು ಇಲ್ಲ
* ಶೈಕ್ಷಣಿಕೆ ಚಟುವಟಿಕೆಗಳು ಬಂದ್
* ಚಿತ್ರಮಂದಿರಗಳು ಕ್ಲೋಸ್
* ಅಂತರ್ ಜಿಲ್ಲೆ, ರಾಜ್ಯ ಓಡಾಟ, ಬಸ್ ಸಂಚಾರ
(ಕೆಎಸ್‌ಆರ್‌ಟಿಸಿ,ಬಿಎಂಟಿಸಿ, ಮೆಟ್ರೋ ಸಂಚಾರ) ಗೂಡ್ಸ್, ಖಾಸಗಿ ವಾಹನಗಳ ಓಡಾಡಕ್ಕೆ ಬಂದ್ ಆದ್ರೆ ಅಂತರ್ ಜಿಲ್ಲೆಗಳ ಗೂಡ್ಸ್ ವಾಹನಗಳ ಓಡಾಡಕ್ಕೆ ಮಾತ್ರ ಅವಕಾಶ ನೀಡಲಾಗಿದೆ.










