ತರಕಾರಿ ತೆಗೆದುಕೊಳ್ಳಲು ಮುಗಿ ಬಿದ್ದ ಜನತೆ ಬೆಳಗಾವಿ

ಬೆಳಗಾವಿ: ಇಂದಿನಿಂದ 14 ದಿನಗಳ ಕಾಲ ಜನತಾ ಕರ್ಪ್ಯೂ ಹಿನ್ನೆಲೆ. ಬೆಳಗಾವಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಾಮಾಜಿಕ ಅಂತರ ಮರೆತು ತರಕಾರಿ ಕೊಂಡುಕೊಳ್ಳಲು ಮುಗಿಬಿದ್ದ ಜನರು ದೃಶ್ಯ ಸಾಮಾನ್ಯವಾಗಿತ್ತು.

promotions

ಹೌದು. ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಮುಗಿಬಿದ್ದ ಜನ. ಹೋಲ್ ಸೆಲ್ ತರಕಾರಿ ಮಾರುಕಟ್ಟೆಯಲ್ಲಿ ಕಿಕ್ಕಿರುದು ಸೇರಿರುವ ಜನ. ಮಹಾರಾಷ್ಟ್ರ ಗೋವಾ ರಾಜ್ಯದಿಂದ ಹೊಲ್ ಸೆಲ್ ತರಕಾರಿ ತೆಗೆದುಕೊಳ್ಳಲು ಆಗಮಿಸಿದ ಜನರು ಸಮಾಜಿಕ ಅಂತರ ಮಾಯವಾಗಿದೆ.

promotions

ಕರೋನ ನಿಯಮ ಉಲ್ಲಂಘನೆ ಮಾಡಿದರೂ ಹೇಳೊರಿಲ್ಲ ಕೇಳೊರಿಲ್ಲ..ಎಪಿಎಂಸಿ ಮಾರುಕಟ್ಟೆ ಹೊರವಲಯದಲ್ಲಿರುವ ರಸ್ತೆ ಬದಿಯಲ್ಲೇ ವ್ಯಾಪಾರ ಜೋರಾಗಿ ನಡೆದಿದೆ.

ಎಪಿಎಂಸಿ ಮಾರುಕಟ್ಟೆ ಮಳಿಗೆಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಹೊರಗಡೆ ರಸ್ತೆ ಬದಿಯಲ್ಲೇ ವ್ಯಾಪಾರ ವಹಿವಾಟು ನಡೆಸಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ಫುಲ್ ಜನ ತುಂಬಿ ತುಳುಕುತ್ತಿದ್ದಾರೆ.

Read More Articles