ಪಶ್ಚಿಮ ಬಂಗಾಳ ಬಿಜೆಪಿ ಕಾರ್ಯಕರ್ತರ ಹಲ್ಲೆ ಖಂಡಿಸಿ ಬೆಳಗಾವಿ ಕಾರ್ಯಕರ್ತರ ಪ್ರತಿಭಟನೆ
- 14 Jan 2024 , 9:59 PM
- Belagavi
- 97
ಬೆಳಗಾವಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಹಲ್ಲೆ ಖಂಡಿಸಿ ಬುಧವಾರ ಬೆಳಗಾವಿ ಬಿಜೆಪಿ ಗ್ರಾಮೀಣ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿದರು.

ಕೋವಿಡ ಕಾರಣದಿಂದಾಗಿ 20ಕ್ಕಿಂತ ಕಡಿಮೆ ಕಾರ್ಯಕರ್ತರು ಮತ್ತು ಕೋವಿಡ ನಿಯಮಗಳನ್ನು ಅನುಸರಿಸಿ ಪ್ರತಿಭಟನೆ ನಡೆಸಿದರು. 48 ಗಂಟೆಗಳಲ್ಲಿ 10 ಜನ ಕಾರ್ಯಕರ್ತರ ಹತ್ಯೆಯಾಗಿದೆ, ನೂರಾರು ಮನೆಗಳು ಅಗ್ನಿಗಾಹುತಿಯಾಗಿವೆ ಪಶ್ಚಿಮ ಬಂಗಾಳ ಇಂದು ಕಾಶ್ಮೀರದ ರೀತಿಯಲ್ಲಿ ಸಾಗುತ್ತಿರುವುದನ್ನು ಮನವಿಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ, ಗ್ರಾಮೀಣ ಜಿಲ್ಲಾ ಸಂಜಯ ಪಾಟೀಲ, ಪಂಕಜ ಘಾಡಿ, ಉಮೇಶ ಪುರಿ, ಶಿವಾಜಿ ಸುಂಟಕರ, ಭಾಗ್ಯಶ್ರೀ ಕೊಕಿತಕರ, ಸ್ವಾತಿ ಜಗದಾಲೆ ಮತ್ತಿತರರು ಉಪಸ್ಥಿತರಿದರು.










