ರೆಮ್ಡಿಸಿವರ್ ನ ಅನಗತ್ಯ ಹಾಗೂ ನಿಯಮಬಾಹಿರ ಬಳಕೆ ಸರಿಯಲ್ಲ : ಎಂ.ಜಿ. ಹಿರೇಮಠ

ಬೆಳಗಾವಿರೆಮ್ಡಿಸಿವರ್ ಪ್ರಾಯೋಗಿಕ, ತನಿಖಾ ಹಂತದಲ್ಲಿರುವ ಔಷಧವಾಗಿದ್ದು, ತುರ್ತು ಸಂದರ್ಭದಲ್ಲಿ ಮಾತ್ರ ದೃಢೀಕರಣಯುಕ್ತ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

promotions

ಇದು ಕೋವಿಡ್-19 ಸೋಂಕಿಗೆ ಜೀವರಕ್ಷಕ ಔಷಧವಲ್ಲ. ಈ ಔಷಧದೊಂದಿಗೆ ಮರಣ ಪ್ರಮಾಣ ಕಡಿಮೆಯಾಗಿದೆ ಎನ್ನುವುದಕ್ಕೆ ಪುರಾವೆಗಳಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದ್ದಾರೆ.

promotions

ರೆಮ್ಡಿಸಿವರ್ ಅನ್ನು ಆಸ್ಪತ್ರೆಗಳಲ್ಲಿ ವೈದ್ಯರ ನಿಗಾದಲ್ಲಿದ್ದಾಗ ಮಾತ್ರ ಪಡೆಯಬೇಕು. ಸಾಧಾರಣ ಅನಾರೋಗ್ಯದಿಂದ ಬಳಲುತ್ತಿರುವ, ಆಮ್ಲಜನಕವನ್ನು ಪಡೆಯುತ್ತಿರುವವರಿಗೆ ಇದನ್ನು ವೈದ್ಯರ ಸಲಹೆ ಮೇರೆಗೆ ನೀಡಲಾಗುತ್ತದೆ. ಇದನ್ನು ಯಾವುದೇ ಕಾರಣಕ್ಕೂ ಮನೆಗಳಲ್ಲಿ ಸ್ವಇಚ್ಛೆಯಿಂದ ಪಡೆಯಬಾರದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಆಸ್ಪತ್ರೆಗಳಲ್ಲಿ ರೆಮ್ಡಿಸಿವರ್ ಲಭ್ಯತೆ :

ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ಒಳರೋಗಿಗಳಿಗೆ ಸರ್ಕಾರದ ವತಿಯಿಂದ ರೆಮ್ಡಿಸಿವರ್ ಚುಚ್ಚುಮದ್ದನ್ನು ಆಸ್ಪತ್ರೆಗೆ ಒದಗಿಸಲಾಗುತ್ತಿದೆ. ಖಾಸಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ಸರ್ಕಾರದ ವತಿಯಿಂದ ದಾಖಲಿಸಲ್ಪಟ್ಟ ಕೋವಿಡ್-19 ಒಳರೋಗಿಗಳಿಗೆ ಕೂಡ ರೆಮ್ಡಿಸಿವರ್ ಚುಚ್ಚುಮದ್ದನ್ನು ಸರ್ಕಾರದಿಂದ ಆಸ್ಪತ್ರೆಗಳಿಗೆ ನೀಡಲಾಗುತ್ತಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ನೇರವಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 ಒಳರೋಗಿಗಳಿಗೆ ರೆಮ್ಡಿಸಿವರ್ ಚುಚ್ಚುಮದ್ದು ಬೇಕಾದಲ್ಲಿ ಆಸ್ಪತ್ರೆಯ ಆಡಳಿತವು ಕೆ ಪಿ ಎಂ ಇ ಪೋರ್ಟಲ್ (kpme.karnataka.gov.in) ನ ಮುಖಾಂತರ ಬೇಡಿಕೆಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಯಾವುದೇ ಕುಂದುಕೊರತೆಗಳಿಗಾಗಿ 24/7 ಕೋವಿಡ್ ವಾರ್ ರೂಮ್ ಬೆಳಗಾವಿ ಸಹಾಯವಾಣಿ0831 2436960 ಅನ್ನು ಸಂಪರ್ಕಿಸಿಬಹುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

Read More Articles