ಕ್ವಾರಂಟೈನ್‌ನಲ್ಲಿದ್ದ ಮಹಿಳೆ ಎಸ್ಕೇಪ್, ಕರದಂಟು ನಗರಿಯಲ್ಲಿ ಹೆಚ್ಚಿದ ಆತಂಕ

ಬೆಳಗಾವಿ: ಮಹಾರಾಷ್ಟ್ರದಿಂದ ಆಗಮಿಸಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್‌ನಲ್ಲಿದ್ದ ಮಹಿಳೆ ಎಸ್ಕೇಪ್ ಆದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನಲ್ಲಿ ನಡೆದಿದೆ. ಇದರಿಂದ ಗೋಕಾಕ್ ನಗರದಲ್ಲಿ ಆತಂಕ ಹೆಚ್ಚಿದೆ. ಮಹಿಳೆ ಪೆರೋಲ್ ಮೇಲೆ ಜೈಲಿನಿಂದ ಬಂದಿದ್ದ ಗಂಡನ ಜೊತೆ ಎಸ್ಕೇಪ್‌ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದ ನೂಲ್ ಗ್ರಾಮದಿಂದ ಪಂಜಾನಟ್ಟಿ ಗ್ರಾಮಕ್ಕೆ ಬಂದಿದ್ದ ಮಹಿಳೆಯನ್ನು ಮಹಾರಾಷ್ಟ್ರದಿಂದ ಆಗಮಿಸಿದ್ದಳೆಂಬ ಕಾರಣಕ್ಕೆ ಗ್ರಾಮ ಪ್ರವೇಶಕ್ಕೆ ಪಂಜಾನಟ್ಟಿ ಗ್ರಾಮಸ್ಥರು ವಿರೋಧಿಸಿದ್ದರು ಎನ್ನಲಾಗಿದೆ. ಬಳಿಕ ಮಹಿಳೆಯನ್ನು ಗೋಕಾಕ್‌ನ ಆಶ್ರಯ ಕಾಲೋನಿಯಲ್ಲಿ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು, ನಿನ್ನೆ ಕ್ವಾರಂಟೈನ್ ಕೇಂದ್ರದಿಂದ 30 ವರ್ಷದ ಮಹಿಳೆ ಎಸ್ಕೇಪ್ ಆಗಿದ್ದಾಳೆ. ಒಂದು ವೇಳೆ ಮಹಿಳೆಗೆ ಕೊರೊನಾ ದೃಢಪಟ್ಟರೆ ಇತರರಿಗೂ ಹರಡುವ ಸಾಧ್ಯತೆ ಹೆಚ್ಚಿದೆ ಎನ್ನುವ ಭೀತಿ ಗೋಕಾಕ ನಗರದಲ್ಲಿ ಮನೆ ಮಾಡಿದೆ. ಪ್ರಕರಣ ದಾಖಲಿಸಿಕೊಂಡು ಗೋಕಾಕ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

promotions

Read More Articles