ಜಮ್ಮು : ಭಾರತಕ್ಕೆ ಭಯೋತ್ಪಾದಕರು ನಿರಂತರವಾಗಿ ಒಳನುಸುಳಿಸುವ ಮೂಲಕ ಕುಖ್ಯಾತಿ ಗಳಿಸಿರುವ ಪಾಪಿ ಪಾಕಿಸ್ತಾನ , ಇದೇ ಮೊದಲ ಬಾರಿಗೆ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಸಾಗಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದೆ . ಗಡಿ ಭದ್ರತಾ ಪಡೆಗಳು ಶನಿವಾರ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದೆ . ಜಮ್ಮು - ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಗೆ ಹೊಂದಿ ಕೊಂಡಿರುವ ಕಠುವಾ ಜಿಲ್ಲೆಯ ಬಳಿ ಅನುಮಾನಾಸ್ಪದವಾಗಿ ಹಾರಿ ಬರುತ್ತಿದ್ದ ಶಸ್ತ್ರಾಸ್ತ್ರತುಂಬಿದ್ದ ಡ್ರೋನ್ ಅನ್ನು ಮುಂಜಾನೆ ವೇಳೆಗೆ ಗಸ್ತಿನಲ್ಲಿದ್ದ ಬಿಎಸ್ಎಫ್ ಯೋಧರು ಹೊಡೆದುರುಳಿಸಿದ್ದಾರೆ . ಡ್ರೋನ್‌ನಲ್ಲಿ ಬಂದೂಕುಗಳು , 2 ಮ್ಯಾಗಜಿನ್ , 60 ಗುಂಡುಗಳು , 1 ಗ್ರೆನೇಡ್‌ಗಳು ಪತ್ತೆಯಾಗಿದ್ದು , ಈ ಕೃತ್ಯದ ಹಿಂದೆ ಪಾಕಿಸ್ತಾನ ಕುಮ್ಮಕ್ಕಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಮೂಲಕ ತಿಳಿದುಬಂದಿದೆ.