ಬೆಳಗಾವಿ ಪೊಲೀಸ್ ರಿಗೆ ಆಟೋದಲ್ಲಿ ಸಿಕ್ಕಿ ಬಿದ್ದ ನಕಲಿ ಪತ್ರಕರ್ತ
- 15 Jan 2024 , 2:23 AM
- Belagavi
- 206
ಬೆಳಗಾವಿ: ಕೊರೋನಾ ಸಂದಿಗ್ಧ ಪರಿಸ್ಥಿಯಲ್ಲಿ ಪೊಲೀಸರೊಂದಿಗೆ ಕಳ್ಳಾಟವಾಡುತ್ತಿದ್ದ ನಕಲಿ ಪ್ರೆಸ್ ಐಡಿ ಸಿದ್ದಪಡಿಸಿಕೊಂಡು ಅನಗತ್ಯವಾಗಿ ಆಟೋದಲ್ಲಿ ಪ್ರಯಾಣಿಕರನ್ನು ಹಾಕಿಕೊಂಡು ರಸ್ತೆಗೆ ಇಳಿದಿದ್ದ ನಕಲಿ ಪತ್ರಕರ್ತನನ್ನು ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಪಿಎಸ್ಐ ಆರ್.ಬಿ.ಸೌದಾಗರ್ ತಪಾಸಸಣೆ ನಡೆಸುವ ವೇಳೆ ಸಿಕ್ಕಿ ಬಿದ್ದ ಘಟನೆ ಬುಧವಾರ ನಡೆದಿದೆ.

ಕೊರೋನಾ ಸಂದರ್ಭದಲ್ಲಿ ಪೊಲೀಸರು ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು ಜನರ ಜೀವನ ರಕ್ಷಣೆ ಮಾಡುತ್ತಿದ್ದಾರೆ. ಅನಗತ್ಯವಾಗಿ ಆಟೋದಲ್ಲಿ ಪ್ರಯಾಣಿಕರನ್ನು ಕುರಿಸಿಕೊಂಡು ಹೊರಟ್ಟಿದ್ದ ನಕಲಿ ಪತ್ರಕರ್ತ ಉಲಾಸ.ಡಿ.ಅಡ್ವಾನಿಯ ನಡೆಯನ್ನು ಸೂಕ್ಷ್ಮವಾಗಿ ಪರಿಗಣಿಸಿದ ಪಿಎಸ್ ಐ ಸೌದಾಗರ ವಿಚಾರಣೆ ಮಾಡಿದಾಗ ಗೋಕಾಕ ಪತ್ರಿಕೆ ನ್ಯಾಯವಾಣಿಯ ವರದಿಗಾರ ಎಂದು ಸುಳ್ಳು ಹೇಳಿದ ಅನುಮಾನ ಬಂದು ಸೌದಾಗರ ನಿಮ್ಮ ಸಂಪಾದಕರಿಗೆ ಕರೆ ಮಾಡಲು ಹೇಳಿದಾಗ ಸ್ಥಳದಲ್ಲಿ ಹೈಡ್ರಾಮಾ ಮಾಡಿದ ನಕಲಿ ಪತ್ರಕರ್ತ ನನಗೆ ಶಾಸಕ ಅನಿಲ್ ಬೆನಕೆ ಗೊತ್ತು ಅವರು ಫೋಟೋ ನಾನೇ ತೆಗೆದಿದ್ದೇನೆ ಎಂದು ಉಡಾಫೆ ಉತ್ತರ ಹೇಳುತ್ತಿದ್ದಂತೆ ಪೊಲೀಸರು ಆತನನ್ನು ಖಡೇಬಜಾರ್ ಪೊಲೀಸ್ ಠಾಣೆಗೆ ಆಟೋ ಸಮೇತ ಕರೆದುಕೊಂಡು ಹೋದರು.

ಮಂಗಳವಾರ ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ನಕಲಿ ಪತ್ರಕರ್ತರ ಕಾರ್ಯಾಚರಣೆ ನಡೆಸಿದ್ದರು. ಅದೇ ರೀತಿ ಬುಧವಾರ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ನಕಲಿ ಪತ್ರಕರ್ತನ ಸೋಗಿನಲ್ಲಿ ಬಂದ ಆಟೋ ಚಾಲಕನನ್ನು ಹಿಡಿದು ಪೊಲೀಸರು ಬಿಸಿ ಮುಟ್ಡಿಸಿದ್ದಾರೆ.










