ಸೈಬರ್ ಅಟ್ಯಾಕ್ ಗೆ ಒಳಗಾದ ಏರ್ ಇಂಡಿಯಾ

  • 30 Dec 2023 , 12:11 PM
  • Delhi
  • 241

ಏರ್ಇಂಡಿಯಾ :ಪ್ರಯಾಣಿಕರ ಸೇವಾ ವ್ಯವಸ್ಥೆಯ ಡೇಟಾ ಪ್ರೊಸೆಸರ್ (ಪ್ರಯಾಣಿಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ಜವಾಬ್ದಾರಿಯನ್ನು ಹೊಂದಿರುವ) ಸಿಟಾ ಪಿಎಸ್ಎಸ್ ಇತ್ತೀಚೆಗೆ ಸೈಬರ್ ಸುರಕ್ಷತೆಯ ದಾಳಿಗೆ ಒಳಗಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

promotions

ಇದು ಕೆಲವು ಪ್ರಯಾಣಿಕರ ವೈಯಕ್ತಿಕ ಡೇಟಾ ಸೋರಿಕೆಗೆ ಕಾರಣವಾಗಿದೆ. ಈ ಘಟನೆಯು ವಿಶ್ವದ ಸುಮಾರು 4,500,000 ಡೇಟಾ ವಿಷಯಗಳ ಮೇಲೆ ಪರಿಣಾಮ ಬೀರಿದೆ. 25.02.2021 ರಂದು ಡೇಟಾ ಪ್ರೊಸೆಸರ್ನಿಂದ ಈ ಕುರಿತು ಮೊದಲ ಅಧಿಸೂಚನೆಯನ್ನು ಏರ್ ಇಂಡಿಯಾ ಸ್ವೀಕರಿಸಿತ್ತು.

promotions

ಪ್ರಯಾಣಿಕರ ಹೆಸರು, ಹುಟ್ಟಿದ ದಿನಾಂಕ, ಫೋನ್ ನಂಬರ್, ಪಾಸ್‌ಪೋರ್ಟ್ ಮಾಹಿತಿ, ಟಿಕೆಟ್ ಮಾಹಿತಿ, ಸ್ಟಾರ್ ಅಲೈಯನ್ಸ್ ಮತ್ತು ಏರ್ ಇಂಡಿಯಾ ಫ್ಲೈಯರ್ ಡೇಟಾವನ್ನು ಒಳಗೊಂಡಿರುವ ವಿವರಗಳೊಂದಿಗೆ 26 ಆಗಸ್ಟ್ 2011 ಮತ್ತು 20 ರ ಫೆಬ್ರವರಿ 2021 ರ ನಡುವೆ ನೋಂದಾಯಿತ ವೈಯಕ್ತಿಕ ಡೇಟಾವನ್ನು ಒಳಗೊಂಡಿತ್ತು. ಕ್ರೆಡಿಟ್ ಕಾರ್ಡ್‌ಗಳ ಡೇಟಾ ಹಾಗು ಇನ್ನಿತರ ಡೇಟಾ ಸೋರಿಕೆಯಾದ್ ಸಂಭವವಿದೆ ಎಂದು ತಿಳಿದು ಬಂದಿದೆ. 

Read More Articles