ಬುದ್ದಿ ಕಲಿಯದ ಚಿಕ್ಕೋಡಿ ಹೈಕ್ಳು 400 ಬೈಕ್ ಸೀಜ್

ಚಿಕ್ಕೊಡಿ: ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ಸರ್ಕಾರ ಹರಸಹಾಸ ಪಡುತ್ತಿದ್ದು ಅಂತರಾಜ್ಯ ಸಂಪರ್ಕ ಕಡಿತಗೊಳೊಸಲು ರಸ್ತೆಗಳ ಮಧ್ಯದಲ್ಲಿ ಮಣ್ಣುಗಳನ್ನು ಹಾಕಿಸಿ ರಸ್ತೆ ಬಂದ ಮಾಡಲಾಗಿದೆ ಅನಧಿಕೃತವಾಗಿ ತಿರುಗಾಡಿದವರಿಗೆ ದಂಡ ವಿಧಿಸಲಾಗುತ್ತಿದ್ದರು ಸಹಿತ ಜನ ಮಾತ್ರ ಬುದ್ದಿ ಕಲಿಯುತ್ತಿಲ್ಲಾ.

promotions

ಹೀಗಾಗಿ ಚಿಕ್ಕೋಡಿ ತಾಲೂಕಿನಲ್ಲಿ ಪೋಲಿಸರು ಅನಧಿಕೃತವಾಗಿ ವಾಹನಗಳ ಮೇಲೆ ತಿರಿಗಾಡುತ್ತಿರುವವರ ವಾಹನ ಸೀಜ್ ಮಾಡಿ ಪೋಲಿಸ್ ಠಾಣೆಗೆ ಇವರೆಗೂ 400 ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಿ ಕರೆದೊಯ್ಯಲಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಕಳೆದ ಹಲವು ದಿನಗಳಿಂದ ಕಟ್ಟುನಿಟ್ಟಿನ ಲಾಕಡೌನ ಜಾರಿಯಲ್ಲಿದೆ. ಈ ಲಾಕ್‌ಡೌನ್ ಸಂಧರ್ಭದಲ್ಲಿ ಬೇಕಾಬಿಟ್ಟಿಯಾಗಿ ಜನರು ಓಡಾಡಬಾರದು ಎಂಬ ಆದೇಶ ಇದ್ದರೂ ಕೂಡಾ ಇಂತಹ ಲಾಕಡೌನ ನಿಯಮಗಳನ್ನು ಗಾಳಿಗೆ ತೋರಿ, ಮಾಸ್ಕ ಇಲ್ಲದೆ ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ವಾಹನಗಳ ಮೇಲೆ ತಿರುಗಾಡುತ್ತಿದವರ ಮೇಲೆ ಪೊಲೀಸ್ ಇಲಾಖೆಯು ಶಿಸ್ತಿನ ಕ್ರಮ ಜರುಗಿಸಿದೆ.

promotions

ವಾಹನಗಳನ್ನು ದಂಡ ನೀಡಿದ ಬಳಿಕ ಮರಳಿ ವಾಹನಗಳನ್ನು ನೀಡಲಾಗಿದ್ದು, ಕೊರೊನಾ ವೇಳೆ ಮೊದಲೇ ಕೆಲಸವಿಲ್ಲ ಅಂತಾ ಜನರು ಪರದಾಡುತ್ತಿದ್ದಾರೆ ಹೀಗಾಗಿ ದಂಡ ಜನರಿಗೆ ಹೆಚ್ಚಿನ ಹೊರೆಯಾಗಬಾರದೆಂಬ ಉದ್ದೇಶದಿಂದ ಎರಡನೂರ ದಿಂದ ಮೂರನೂರವರೆಗೆ ದಂಡ ವಿಧಿಸಿ ಜನರಿಗೆ ತಿಳಿ ಹೇಳಿ ಸೀಜ್ ಮಾಡಿದ ವಾಹನಗಳನ್ನು ಮರಳಿ ನೀಡಲಾಗಿದೆ.

Read More Articles