ಕೊರೋನಾ ಸಮಯದಲ್ಲಿ ಕಾರ್ಮಿಕರ ಕೈ ಹಿಡಿದ ಟಾಟಾ

  • 30 Dec 2023 , 9:43 AM
  • Delhi
  • 133

ದೆಹಲಿ : ಭೀಕರ ಸಾಂಕ್ರಾಮಿಕ ಸಮಯದಲ್ಲಿ ಟಾಟಾ ಸ್ಟೀಲ್ ತನ್ನ ಪ್ರೀತಿಯ ಉದ್ಯೋಗಿಗಳ ದುಃಖದ ಸಮಯದಲ್ಲಿ ಅವರ ಜೊತೆ ನಿಲ್ಲಲು ಎಂದಿಗೂ ಸಿದ್ದ ಎಂದು ಟಾಟಾ ಸ್ಟಿಲ್ ಘೋಷಿಸಿದೆ.

promotions
logintomyvoice

COVID-19 ಕಾರಣದಿಂದಾಗಿ ನಿಧನರಾದ ಯಾವುದೇ ಉದ್ಯೋಗಿಯ ಕುಟುಂಬವು ಮೃತ ವ್ಯಕ್ತಿಯ ನಿವೃತ್ತಿ ವಯಸ್ಸಿನವರೆಗೆ ಮಾಸಿಕ ವೇತನವನ್ನು ಪಡೆಯುವುದನ್ನು ಟಾಟಾ ಸ್ಟೀಲ್ ಘೋಷಿಸಿದೆ.

promotions

ಕುಟುಂಬಕ್ಕೆ ಮಾಸಿಕ ವೇತನವು ನೌಕರನ ಸಾವಿಗೆ ಮುಂಚಿತವಾಗಿ ಪಡೆದ ಕೊನೆಯ ವೇತನದಂತೆಯೇ ಇರುತ್ತದೆ.

ಇದರ ಜೊತೆಗೆ ಕೋವಿಡ್-19 ಕಾರಣದಿಂದಾಗಿ ದುರದೃಷ್ಟಕರ ಸಾವನ್ನು ಎದುರಿಸಿದ ಎಲ್ಲಾ ಮುಂಚೂಣಿ ಉದ್ಯೋಗಿಗಳ ಮಕ್ಕಳು ಪದವಿ ಪಡೆಯುವವರೆಗೂ ಕಂಪನಿಯು ಅವರ ಶಿಕ್ಷಣದ ಎಲ್ಲಾ ವೆಚ್ಚಗಳನ್ನು ಭರಿಸುತ್ತದೆ ಎಂದು ಟಾಟಾ ತಿಳಿಸಿದೆ.

ಟಾಟಾ ಸ್ಟೀಲ್ ಕುಟುಂಬವು ತನ್ನ ಎಲ್ಲ ಕಾರ್ಮಿಕರೊಂದಿಗೆ ದೃಡವಾಗಿ ನಿಂತಿದೆ, ಅವರ ಭದ್ರತೆ ಮತ್ತು ಯೋಗಕ್ಷೇಮಕ್ಕೆ ಬದ್ಧವಾಗಿದೆ ಎಂದು ತಿಳಿಸಿದೆ

Read More Articles