ಕೆಎಲ್‌ಇ ಐಸೋಲೇಶನ್‌ ಕೇಂದ್ರದಲ್ಲಿ ಈಗ ಆಕ್ಸಿಜನ್ ಬೆಡ್‌ಗಳ ಸೌಲಭ್ಯ

ಬೆಳಗಾವಿ: ದಿನೇದಿನೇ ಹೆಚ್ಚುತ್ತಿರುವ ಮಹಾಮಾರಿ ಕೋವಿಡ್ ಸೋಂಕಿನ ವಿರುದ್ಧದ ಸಮರಕ್ಕೆ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಕೇಂದ್ರವು ಕೈ ಜೋಡಿಸಿ ಕೋವಿಡ್ ರೋಗಿಗಳ ಆರೈಕೆಗಾಗಿ ಕೆ.ಎಲ್.ಇ ಲಿಂಗರಾಜ್‌ ಕ್ಯಾಂಪಸ್ ನಲ್ಲಿ ಐಸೋಲೇಶನ್‌ ಕೇಂದ್ರ ತೆರೆದಿತ್ತು.

promotions

ಕೇಂದ್ರ ಪ್ರಾರಂಭಿಸಿದಾಗ ಆಕ್ಸಿಜನ್ ಬೆಡ್‌ಗಳ ಸೌಲಭ್ಯಇರಲಿಲ್ಲ. ಈಗ ಈ ಕೊರತೆಯನ್ನುಕೂಡ ನಿವಾರಿಸಿದೆ.10 ಆಕ್ಸಿಜನ್ ಬೆಡ್‌ಗಳ ಸೌಲಭ್ಯವನ್ನು ಕಲ್ಪಿಸಿದೆ. ಜಿಲ್ಲೆಯಲ್ಲಿ ಕೋವಿಡ್‌ ಉಲ್ಬಣಗೊಂಡಿದ್ದು, ಇತ್ತ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್‌ ಅಭಾವಕೂಡ ಕಾಡುತ್ತಿತ್ತು.

promotions

ಕೆಎಲ್‌ಇ ಮಹಿಳಾ ಘಟಕ, ಕೈಗೆಟುಕುವದರದಲ್ಲಿ 50 ಬೆಡ್‌ಗಳ ಕೋವಿಡ್‌ ಕೇಂದ್ರ ಪ್ರಾರಂಭಿಸಿ ಅಲ್ಪಾವಧಿಯಲ್ಲಿ 10 ಆಕ್ಸಿಜನ್ ಬೆಡ್‌ಗಳ ಸೌಲಭ್ಯವನ್ನು ಕೂಡ ಕಲ್ಪಿಸಿದೆ. ಇನ್ನುಳಿದಂತೆ ತರಬೇತಿ ಪಡೆದನುರಿತ ವೈದ್ಯರಿಂದ ದಿನದ 24 ಗಂಟೆಗಳ ಕಾಲ ಆರೈಕೆ ವ್ಯವಸ್ಥೆ ಮಾಡಲಾಗುತ್ತ್ತಿದೆ.

ಬಿಪಿ ಹಾಗೂ ಶುಗರ್‌ಚೆಕ್ ಮಾಡಲಾಗುತ್ತ್ತಿದೆ.ಆಂಬ್ಯುಲೆನ್ಸ್ ವ್ಯವಸ್ಥೆಇದೆ. ಉತ್ತಮ ಗುಣಮಟ್ಟದ ಆರೋಗ್ಯಕರ ಆಹಾರದ ಜೊತೆಗೆ ಯೋಗ ಮತ್ತು ಜೂಮ್‌ ಆ್ಯಪ್‌ನ ತಂತ್ರಜ್ಞಾನ ಕೂಡ ಕಲ್ಪಸಿದೆ.

ಹೆಚ್ಚಿನ ಮಾಹಿತಿಗಾಗಿ +918197671083 / +919986631942 ಗೆ ಸಂಪರ್ಕಿಸಬಹುದು ಎಂದು ಕೆ.ಎಲ್.ಇ. ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕ ಪತ್ರಿಕಾ ಪ್ರಕಟಣೆ ಮೂಲಕ ತಿಳುಹಿಸಿದೆ.

Read More Articles