ಕಮಲಾ ತಾಯಿ ಫೌಂಡೇಷನ್ ನಿಂದ ಉಚಿತವಾಗಿ ಮಾಸ್ಕ್ ವಿತರಣೆ
- 30 Dec 2023 , 11:34 AM
- Belagavi
- 120
ಬೆಳಗಾವಿ :ಕೊರೊನಾ ಸಂಕಷ್ಟದ ಕಾಲದಲ್ಲಿ ಅದರ ವಿರುದ್ಧ ಹೋರಾಟ ಮಾಡಲು ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದರ ಜೊತೆಗೆ ಸಾನಿಟೈಸರ್ ಉಪಯೋಗಿಸುವುದು ಬಹು ಮುಖ್ಯವಾದ ಮಂತ್ರ.

ಅದಕ್ಕಾಗಿ ಕಮಲಾ ತಾಯಿ ಫೌಂಡೇಶ್ ವತಿಯಿಂದ ಮಾಸ್ಕ್ ಹಾಗೂ ಸಾನಿಟೈಸರ್ ಬಡ ಜನರಿಗೆ ಉಚಿತವಾಗಿ ವಿತರಿಸಲಾಯಿತು. ಕರೋನಾ ಎಫೆಕ್ಟ್ ಗೆ ಕಂಗಾಲ ಆಗಿರು ಜನರಿಗೆ ಕಮಲಾ ತಾಯಿ ಫೌಂಡೇಶನ ಪ್ರತಿ ದಿನ ನಿತ್ಯ ನೆರವು ನೀಡುತ್ತಿದೆ.ಈ ಫೌಂಡೇಶನ್ ಕಾರ್ಯಕರ್ತರು, ಖಾನಾಪುರ ತಾಲ್ಲೂಕಿನ ಪ್ರತಿ ಹಳ್ಳಿ ಹಳ್ಳಿಗು ಸಂಚರಿಸಿ ಬಡವರಿಗೆ ಮಾಸ್ಕ್, ಸಾನಟೈಸರ್, ಹಣ್ಣು,ಮೆಡಿಸಿನ್ ಕಿಟ್ ನೀರಿನ ಬಾಟೆಲ್, ವಿತರಿಸಿ ಸಂಕಷ್ಟ ಕಾಲದಲ್ಲಿ ಮಾನವೀಯತೆ ಮೆರೆಯುತ್ತಿದ್ದಾರೆ.

ಗುರುವಾರ ಕಮಲಾ ತಾಯಿ ಫೌಂಡೇಶ್ ಸಂಸ್ಥಾಪಕ ಸಿದ್ದು ಪಾಟೀಲ ಅವರು ತಮ್ಮ ತಂಡದೊಂದಿಗೆ ಕಕ್ಕೇರಿ .ಮಂಗ್ಯಾನಕೊಪ್ಪ .ಮಖಬಸವನಗರ .ಬೀಡಿ ಹಾಗೂ ಲಂಗನಮಠ ಗ್ರಾಮಗಳಿಗೆ ಭೇಟಿ ನೀಡಿ ಉಚಿತವಾಗಿ ವಿತರಣೆ ಮಾಡಲಾಯಿತು. ಈ ವೇಳೆ ಸುನಿಲ ಮರಡಿಮನೀ, ವಿಶಾಲ ಪಾಟೀಲ , ರಾಜು ಸವದಿ ಸೆರಿದಂತೆ ಅನೇಕರು ಉಪಸ್ಥಿತರಿದ್ದರು ಇವರ ಈ ಸಮಾಜಸೇವೆ ಕಾರ್ಯಕ್ಕೆ ಸಾರ್ವಜನಿಕರು ನಿಮಗೊಂದು ಸಲಾಂ ಎನ್ನುತ್ತಿದ್ದಾರೆ.










