ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ಹೋಂ ಐಸೋಲೇಶನ್ ಕಿಟ್ ವಿತರಣೆ

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ಕೊರೋನಾ ಸೋಂಕಿನ ಸರಪಳಿಯನ್ನು ಕತ್ತರಿಸಿ ಕೊರೋನಾ ಮುಕ್ತವನ್ನಾಗಿಸಲು ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಕೋವಿಡ್ ಹೋಮ್ ಐಸೋಲೇಷನ್ ಕಿಟ್ ಗಳನ್ನು ವಿತರಿಸಲು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮುಂದಾಗಿದ್ದಾರೆ.

promotions

ಈ ಹಿನ್ನೆಲೆಯಲ್ಲಿ ಕಿಟ್ ತಯಾರಿಸುವ ಕಾರ್ಯ ಭರದಿಂದ ನಡೆಯುತ್ತಿದ್ದು, ಒಂದೆರಡು ದಿನದಲ್ಲಿ ಪ್ರತಿ ಮನೆಗೆ ವಿತರಣೆ ನಡೆಯಲಿದೆ. ಇದರ ಜೊತೆಯಲ್ಲಿ ಜನರಿಗೆ ಕೆಲವು ಸಲಹೆಗಳನ್ನೂ ಹೆಬ್ಬಾಳಕರ್ ನೀಡಿದ್ದಾರೆ.

promotions

ಪ್ರಮುಖ ಸಲಹೆಗಳು ಹೀಗಿವೆ

 1  ಕೊರೋನಾ ಬಗ್ಗೆ ಯಾರೂ ಹೆದರದೇ ನಾಗರಿಕರೆಲ್ಲರು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆಗಳನ್ನು (ವ್ಯಾಕ್ಸಿನ್) ಹಾಕಿಸಿಕೊಳ್ಳುವ ಮುಖೇನ ಕೊರೋನಾವನ್ನು ತಡೆಗಟ್ಟಬೇಕು.

2 ಯಾರಿಗಾದರೂ ಸೋಂಕಿನ ಲಕ್ಷಣಗಳು ಕಂಡು ಬಂದರೆ ಕೊಡಲೇ ಹತ್ತಿರದ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಟ್ಟು ತಪಾಸಣೆ ಮಾಡಿಸಿಕೊಳ್ಳಬೇಕು.

3 ಅನಗತ್ಯವಾಗಿ ಯಾರೊಬ್ಬರೂ ಹೊರಗಡೆ ಬರಬರದು. ನಿಮ್ಮ ಕುಟುಂಬಸ್ಥರ ಆರೋಗ್ಯ ನಿಮ್ಮ ಮೇಲಿರುವ ಕಾರಣ ಎಚ್ಚೆತ್ತುಕೊಳ್ಳಬೇಕು..

4  ಅನಗತ್ಯವಾಗಿ ಮಕ್ಕಳನ್ನು ಇತರ ಆಟದ ಸ್ಥಳಗಳಿಗೆ ಕರೆದೊಯ್ಯಬಾರದು.

5 ಎದೆಹಾಲು ಕುಡಿಸುವ ತಾಯಂದಿರು ಕೂಡ ಹೊರಗೆ ಹೋಗಬಾರದು.

6  ಮಕ್ಕಳೊಂದಿಗೆ ಕುಟುಂಬ ಭೇಟಿ, ಔತಣಕೂಟಗಳನ್ನು ಆದಷ್ಟು ತಪ್ಪಿಸಬೇಕು.

7  ಅನಗತ್ಯವಾಗಿ ತಂದೆಯ ಮನೆ, ತಾಯಿಯ ಮನೆ, ಇತರ ಸಂಬಂಧಿಕರ ಮನೆಗಳಿಗೆ ಕೂಡ ಹೋಗದೆ ಎಚ್ಚರವಹಿಸಬೇಕು.

8  ಚಿಕ್ಕ ಶಿಶುಗಳನ್ನು ತೆಗೆದುಕೊಳ್ಳಲು ಅಥವಾ ಮುದ್ದಿಸಲು ಇತರರನ್ನು ಅನುಮತಿಸಬಾರದು.

9  ಚಿಕ್ಕ ಮಕ್ಕಳ ಬಗ್ಗೆ ಹೆಚ್ಚಿನ ಜಾಗೃತವಹಿಸಬೇಕು. ಆಗಾಗ ಮಕ್ಕಳ ಕೈಗಳನ್ನು ತೊಳೆಯಬೇಕು.

10 ನಿಮಗೆ ಯಾವುದೇ ಕಾಯಿಲೆ ಇದ್ದರೆ, ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಮಾಡಿಸಿ, ಹೆಚ್ಚಿನ ಚಿಕಿತ್ಸೆಯನ್ನು ಸೂಚಿಸಿದರೆ ಮಾತ್ರ ಬೇರೆ ಆಸ್ಪತ್ರೆಗೆ ಹೋಗಬೇಕು.

11 ಮಕ್ಕಳ ಸಂಬಂಧಿತ ಎಲ್ಲಾ ಆಚರಣೆಗಳಾದ ಜವಳ ತೆಗೆಯುವಿಕೆ ಮತ್ತು ನಾಮಕರಣವನ್ನು ಮುಂದೂಡಿ.

12  ಮಕ್ಕಳ ಆಹಾರದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇರಿಸಿ.

 13 ನೆರೆಹೊರೆಯ ಮನೆಗಳಲ್ಲಿ ಸಹ ಮಕ್ಕಳನ್ನು ಆಟವಾಡಲು ಬಿಡಬೇಡಿ.

14 ಹೊರಗಿನಿಂದ ಬಂದವರ ಸಂಪರ್ಕವನ್ನು ಆದಷ್ಟು ಮಕ್ಕಳಿಂದ ತಪ್ಪಿಸಿ.

Read More Articles