ಸೇವಾ ನಿವೃತ್ತಿ ಹೊಂದಿದ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಪಿ.ಸಿ ರಾಥೋಡ ಅವರಿಗೆ ಬೀಳ್ಕೊಡುಗೆ
- 17 Dec 2023 , 11:51 PM
- Belagavi
- 170
ಬೆಳಗಾವಿ: ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಪಿ.ಸಿ ರಾಥೋಡ ಅವರು 32 ವರ್ಷಗಳ ಕಾಲ ಸರ್ಕಾರಿ ಸೇವೆ ಸಲ್ಲಿಸಿ, ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಇಲಾಖೆಯ ವತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಬೆಳಗಾವಿಯ ಜಿಲ್ಲಾ ಪಂಚಾಯತ್ ನಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಮೇ.31ರಂದು ವಯೋನಿವೃತ್ತಿ ಹೊಂದಿದ ಪಿ.ಸಿ ರಾಥೋಡ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿಗಳಾದ ಪ್ರಕಾಶ ವಡ್ಡರ ಅವರು, ಜಿಲ್ಲಾ ಪಂಚಾಯತ್ ನಲ್ಲಿ ಸಾರ್ಥಕ ಸೇವೆ ಸಲ್ಲಿಸಿರುವ ಪಿ.ಸಿ ರಾಥೋಡ ಅವರ ವಯೋನಿವೃತ್ತಿ ಜೀವನ ಸುಖಕರವಾಗಿ ಮತ್ತು ಆರೋಗ್ಯದಾಯಕವಾಗಿ ಇರಲಿ ಎಂದು ಹಾರೈಸಿದರು.
ಇದೇ ವೇಳೆ,ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿಗಳಾದ ಜಿ.ಪಿ ಸುಂಕದ, ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಎನ್.ಎಸ್ ಹೂಗಾರ, ಅಧೀಕ್ಷಕರಾದ ಎಸ್.ಎನ್ ವಣ್ಣೂರು, ವಿಕ್ರಮ ಜಾಧವ, ಶ್ರೀಧರ, ಪವಿತ್ರ ಸಿ.ಎನ್ ಹಾಗೂ ಇತರ ಜಿಲ್ಲಾ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದು, ವಯೋ ನಿವೃತ್ತಿ ಹೊಂದಿದ ಪಿ.ಸಿ ರಾಥೋಡ ಅವರ ಸೇವೆಯನ್ನು ಸ್ಮರಿಸಿದರು.
ಎನ್. ಎಸ್. ಹೂಗಾರ, ಎ.ಎಸ್.ಓ ಕಾರ್ಯಕ್ರಮವನ್ನು ನಿರೂಪಿಸಿದರು.










