ಮತ್ತೋರ್ವ ಕಾಶ್ಮೀರಿ ಪಂಡಿತನನ್ನು ಹತ್ಯೆಗೈದ ಲಷ್ಕರ ಭಯೋತ್ಪಾದಕರು

ಜಮ್ಮು :ಬಿಜೆಪಿ ನಾಯಕ ರಾಕೇಶ್ ಪಂಡಿತ ದಕ್ಷಿಣ ಕಾಶ್ಮೀರದ ಟ್ರಾಲ್ನಲ್ಲಿರುವ ತನ್ನ ಮನೆಯ ಹೊರಗೆ ಭಯೋತ್ಪಾದಕರಿಂದ ಗುಂಡಿನ ದಾಳಿಗೆ ಒಳಪಟ್ಟಿದ್ದಾರೆ ಎಂದು ಕಾಶ್ಮೀರದ ಐಜಿ ವಿಜಯ ಕುಮಾರ ತಿಳಿಸಿದ್ದಾರೆ. ಐಜಿ ವಿಜಯ್ ಕುಮಾರ ಅವರು ಕಾಶ್ಮೀರಿ ಪಂಡಿತ್ ರಾಕೇಶ್ ಪಂಡಿತ್ ತಮ್ಮ ಸ್ನೇಹಿತ ಮುಸ್ತಾಕ್ ಭಟ್ ಅವರನ್ನು ಟ್ರಾಲ್ನಲ್ಲಿ ಭೇಟಿಯಾಗಲು ಹೋಗಿದ್ದರು ಎಂದು ತಿಳಿಸಿದ್ದಾರೆ.

promotions

ಮೂವರು ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆ ಗೈದಿದ್ದಾರೆ ಎಂದು ತಿಳಿದು ಬಂದಿದೆ. ಈ  ದಾಳಿಯಲ್ಲಿ ಪಂಡಿತ ಅವರ ಸ್ನೇಹಿತನ ಮಗಳು ಕೂಡ ಗಂಭೀರವಾಗಿ ಗಾಯಗೊಂಡಿದ್ದಾಳೆ.

promotions

ತ್ರಾಲ್‌ನಲ್ಲಿ ಕಾಶ್ಮೀರಿ ಪಂಡಿತ್ ರಾಕೇಶ್ ಪಂಡಿತ ಅವರ ಮೇಲಿನ ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನದ ಭಯೋತ್ಪಾದಕ ಗುಂಪು ಲಷ್ಕರ್ ವಹಿಸಿಕೊಂಡಿದೆ.

Read More Articles