ಶಾಸಕ ಸತೀಶ ಜಾರಕಿಹೊಳಿ ಅನುದಾನದಡಿ ಕಾಕತಿ ಆರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಕಿಟ್ ವಿತರಣೆ
- 14 Jan 2024 , 10:57 PM
- Belagavi
- 126
ಬೆಳಗಾವಿ: ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿಯವರ ಅನುದಾನದಡಿ ಮತಕ್ಷೇತ್ರದ ಕಾಕತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಂದು ಆಕ್ಸಿಜನ್ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದು ಸುಣಗಾರ, ಮುಖಂಡರಾದ ಸುರೇಶ ನಾಯ್ಕ್, ಯಲ್ಲಪ್ಪ ಕೋಳೆಕರ್, ಸಿದ್ಧಿಕಿ ಅಂಕಲಗಿ ಸೇರಿ ಗ್ರಾಮ ಪಂಚಾಯತನ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲ ಸದಸ್ಯರು, ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.











