ಯಕ್ಸಂಬಾ ಪಟ್ಟಣ ಪಂಚಾಯತಿಗೆ 2.5 ಕೋಟಿ ಅನುದಾನ ಹಸ್ತಾಂತರ
ಚಿಕ್ಕೋಡಿ:ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಪ್ರಕಾಶ ಹುಕ್ಕೇರಿ ಹಾಗೂ ಶಾಸಕರಾದ ಗಣೇಶ ಹುಕ್ಕೇರಿ ಅವರು ಯಕ್ಸಂಬಾ ಪಟ್ಟಣ ಪಂಚಾಯತಿ ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕಾಗಿ ತಮ್ಮ ಪ್ರಯತ್ನದಿಂದ ಮಂಜೂರಾದ 2.5 ಕೋಟಿ ರೂಪಾಯಿ ಅನುದಾನದ ಆದೇಶ ಪ್ರತಿಯನ್ನು ಪಟ್ಟಣ ಪಂಚಾಯತಿ ಸದಸ್ಯರಿಗೆ ಹಸ್ತಾಂತರಿಸಿದರು.
ಈ ವೇಳೆ ಪಟ್ಟಣ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.