ಆಟೋದಲ್ಲಿ ಅಕ್ರಮ ಗೋವಾ ಮದ್ಯ ಸಾಗಾಣಿಕೆ: ದಾಳಿ ನಡೆಸಿದ ಪೊಲೀಸರು

ಕಾರವಾರ: ಆಟೋದಲ್ಲಿ ಅಕ್ರಮ ಗೋವಾ ಮದ್ಯ ಸಾಗಾಣಿಕೆ ಮಾಡುತ್ತಿರುವಾಗ ದಾಳಿ ನಡೆಸಿದ ಶಹರ ಠಾಣೆ ಪೊಲೀಸರು ಮುಕ್ಕಾಲು ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಹಿರೇಶೆಟ್ಟಾದಲ್ಲಿ ನಡೆದಿದೆ.

promotions

ಆಟೋದಲ್ಲಿದ್ದ 75 ಸಾವಿರ ರೂ. ಮೌಲ್ಯದ ಗೋವಾ ಮದ್ಯವನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿ ಶ್ರೀಪಾದ ಕೊಳಂಕರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಕಳ್ಳ ಸಾಗಾಣಿಕೆಗೆ ಬಳಸಲಾದ ಆಟೋವನ್ನು ಸೀಜ್ ಮಾಡಿದ್ದಾರೆ. ಪೊಲೀಸರು ವಶಕ್ಕೆ ಪಡೆದ ಅಕ್ರಮ ಗೋವಾ ಮದ್ಯ ಮತ್ತು ಆಟೋವನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.

promotions

ತಾಲೂಕಿನ ಹಿರೇಶೆಟ್ಟಾದ ಚಂದ್ರಾದೇವಿವಾಡದ ಸಮೀಪ ಆಟೋ ಮೇಲೆ ಅಕ್ರಮ ಗೋವಾ ಮದ್ಯ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ DSP ಅರವಿಂದ ಕಲಗುಜ್ಜಿ ,ಸಿಪಿಐ ಸಂತೋಷ ಶೆಟ್ಟಿ ಇವರು ಮಾರ್ಗದರ್ಶನದಲ್ಲಿ ಶಹರ ಪೋಲಿಸ್ ಠಾಣೆಯ ಪಿಎಸೈ ಸಂತೋಷಕುಮಾರ ಅವರು ದಾಳಿ ನಡೆಸಿದ್ದಾರೆ. ಪೊಲೀಸರನ್ನು ನೋಡಿದ ಆರೋಪಿ ಶ್ರೀಪಾದ ಕೊಳಂಕರ್ ಆಟೋ ಬಿಟ್ಟು ಪರಾರಿಯಾಗಿದ್ದಾನೆ.

Read More Articles