ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜನರಿಗೆ ಲಸಿಕೆ ನೀಡಲು 2.18 ಕೋಟಿ ಡೋಸ್‌ಗಳು ಲಭ್ಯ:ಎಮಓಎಚ

ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಭಾಗವಾಗಿ, ಭಾರತ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ಒದಗಿಸುವ ಮೂಲಕ ಬೆಂಬಲ ನೀಡುತ್ತಿದೆ. ಇದಲ್ಲದೆ, ಭಾರತ ಸರಕಾರವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆಗಳನ್ನು ನೇರವಾಗಿ ಖರೀದಿಸಲು ಅನುಕೂಲ ಮಾಡಿಕೊಡುತ್ತಿದೆ. ಸಾಂಕ್ರಾಮಿಕದ ನಿಯಂತ್ರಣ ಮತ್ತು ನಿರ್ವಹಣೆಗೆ ಭಾರತ ಸರಕಾರ ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ಕೋವಿಡ್‌-ಸೂಕ್ತ ನಡವಳಿಕೆ ಸೂತ್ರಗಳನ್ನು ಒಳಗೊಂಡ ಸಮಗ್ರ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದು, ಲಸಿಕೆಯೂ ಇದರ ಅವಿಭಾಜ್ಯ ಅಂಗವಾಗಿದೆ.

promotions

ಕೋವಿಡ್-19 ಲಸಿಕೆಯ ಉದಾರೀಕರಣ ಹಾಗೂ ವೇಗವರ್ಧಿತ 3ನೇ ಹಂತದ ಕಾರ್ಯತಂತ್ರದ ಅನುಷ್ಠಾನವು 2021ರ ಮೇ 1ರಿಂದ ಆರಂಭವಾಗಿದೆ.ಈ ಕಾರ್ಯತಂತ್ರದ ಅಡಿಯಲ್ಲಿ, ಯಾವುದೇ ತಯಾರಕ ಸಂಸ್ಥೆಯು ಪ್ರತಿ ತಿಂಗಳು ಉತ್ಪಾದಿಸುವ ʻಕೇಂದ್ರ ಔಷಧಪ್ರಯೋಗಾಲಯದ (ಸಿಡಿಎಲ್) ಅನುಮೋದನೆ ಪಡೆದ ಒಟ್ಟು ಲಸಿಕೆಗಳ ಡೋಸ್‌ಗಳಲ್ಲಿ ಶೇ. 50ರಷ್ಟನ್ನು ಭಾರತ ಸರಕಾರವು ಖರೀದಿಸುತ್ತದೆ. ಈ ಡೋಸ್‌ಗಳನ್ನು ಈ ಹಿಂದಿನಂತೆಯೇ ರಾಜ್ಯ ಸರಕಾರಗಳಿಗೆ ಉಚಿತವಾಗಿ ಹಂಚುವುದನ್ನು ಮುಂದುವರಿಸಲಾಗುವುದು.

promotions

ಇಲ್ಲಿಯವರೆಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 27.28 ಕೋಟಿ (27,28,31,900) ಲಸಿಕೆ ಡೋಸ್‌ಗಳನ್ನು ಭಾರತ ಸರಕಾರದ ಮೂಲಕ (ಉಚಿತವಾಗಿ) ಮತ್ತು ರಾಜ್ಯಗಳಿಂದ ನೇರ ಖರೀದಿ ಮಾರ್ಗದ ಮೂಲಕ ಒದಗಿಸಲಾಗಿದೆ.

ಈ ಪೈಕಿ ವ್ಯರ್ಥವಾದ ಡೋಸ್‌ಗಳು ಸೇರಿದಂತೆ ಬಳಕೆಯಾದ ಒಟ್ಟು ಡೋಸ್‌ಗಳು 25,10,03,417 (ಇಂದು ಬೆಳಿಗ್ಗೆ 8 ಗಂಟೆಗೆ ಲಭ್ಯವಿದ್ದ ದತ್ತಾಂಶದಪ್ರಕಾರ).

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ ಜನರಿಗೆ ನೀಡಲು ಇನ್ನೂ 2.18 ಕೋಟಿಗಿಂತಲೂ ಹೆಚ್ಚು (2,18,28,483) ಕೋವಿಡ್ ಲಸಿಕೆಯ ಡೋಸ್‌ಗಳು ಲಭ್ಯವಿವೆ.

ಇದಲ್ಲದೆ, 56,70,350 ಕ್ಕಿಂತಲೂ ಹೆಚ್ಚು ಲಸಿಕೆ ಡೋಸ್‌ಗಳು ಮಾರ್ಗಮಧ್ಯದಲ್ಲಿದ್ದು ಮುಂದಿನ 3 ದಿನಗಳಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಲಿವೆ.

Read More Articles