ಬಾಗಲಕೋಟ ಜಿಲ್ಲೆಯಲ್ಲಿ ಇಂದು 70 ಜನ ಗುಣಮುಖ, 10 ಹೊಸ ಪ್ರಕರಣಗಳು ದೃಡ
- 30 Dec 2023 , 12:04 PM
- Bagalkot
- 125
ಬಾಗಲಕೋಟೆ : ಜಿಲ್ಲೆಯಲ್ಲಿ ಕೋವಿಡ್‍ನಿಂದ 70 ಜನ ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ. ಹೊಸದಾಗಿ 10 ಕೊರೊನಾ ಪ್ರಕರಣಗಳು ಹಾಗೂ 1 ಮೃತ ಪ್ರಕರಣ ರವಿವಾರ ದೃಡಪಟ್ಟಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 34894 ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಈ ಪೈಕಿ ಇಲ್ಲಿಯವರೆಗೆ ಒಟ್ಟು 33947 ಜನ ಕೋವಿಡ್‍ನಿಂದ ಗುಣಮುಖರಾಗಿದ್ದಾರೆ. 1780 ಸ್ಯಾಂಪಲ್‍ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 666284 ಸ್ಯಾಂಪಲ್ ಪರೀಕ್ಷಿಸಲಾಗಿದ್ದು. ಅದರಲ್ಲಿ 629010 ನೆಗಟಿವ್ ಪ್ರಕರಣ, ಹಾಗೂ 308 ಮೃತ ಪ್ರಕರಣಗಳು ವರದಿಯಾಗಿರುತ್ತದೆ. ಇನ್ನು 639 ಮಾತ್ರ ಸಕ್ರಿಯ ಪ್ರಕರಣಗಳು ಇದ್ದು, ಇಲ್ಲಿವರೆಗೆ ಒಟ್ಟು 498 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ.

ಹೊಸದಾಗಿ ಬಾಗಲಕೋಟೆ ತಾಲೂಕಿನಲ್ಲಿ 723 ಸ್ಯಾಪಲ್ ಪರೀಕ್ಷೆಯಿಂದ 3, ಬಾದಾಮಿ 344 ಪರೀಕ್ಷೆಯಿಂದ 2, ಬೀಳಗಿ 195 ಸ್ಯಾಂಪಲ್ ಪರೀಕ್ಷೆಯಿಂದ 0, ಜಮಖಂಡಿ 361 ಪರೀಕ್ಷೆಯಿಂದ 0, ಮುಧೋಳದಲ್ಲಿ 225 ಜನರ ಪರೀಕ್ಷೆಯಿಂದ 4 ಹಾಗೂ ಹುನಗುಂದಲ್ಲಿ 762 ಸ್ಯಾಂಪಲ್ ಪರೀಕ್ಷೆಯಿಂದ 1 ಜನರಲ್ಲಿ ಸೋಂಕು ದೃಡಪಟ್ಟಿವೆ. ಪಾಜಿಟಿವಿಟಿ ಪ್ರಮಾಣ ಶೇ 0.38 ಇರುತ್ತದೆ.
ಜಿಲ್ಲೆಯಲ್ಲಿ ಅತೀ ಹೆಚ್ಚು ಮುಧೋಳ ತಾಲೂಕಿನಲ್ಲಿ ಶೇ. 1.78 ರಷ್ಟು ಕಂಡುಬಂದರೆ ಅತೀ ಕಡಿಮೆ ಶೇ.0 ರಷ್ಟು ಬೀಳಗಿ, ಜಮಖಂಡಿ ತಾಲೂಕಿನಲ್ಲಿ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.










