ಡಬ್ಲ್ಯೂಟಿಸಿ ಫೈನಲ: ನ್ಯೂಜಿಲ್ಯಾಂಡಗೆ ಜಯ

  • 15 Jan 2024 , 3:48 AM
  • world
  • 172

ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಜಯಭೇರಿ ಬಾರಿಸಿದೆ. ಎರಡನೇ ಇನ್ನಿಂಗ್ಸ್​ನಲ್ಲಿ 139 ರನ್​ಗಳ ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ 2 ವಿಕೆಟ್ ಕಳೆದುಕೊಂಡು, 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟಯ್ಲರ್ ಗೆಲುವಿನ ಜೊತೆಯಾಟ ನೀಡಿದ್ದಾರೆ. ವಿಲಿಯಮ್ಸನ್ ಅರ್ಧಶತಕ ಪೂರ್ತಿಗೊಳಿಸಿದರೆ, ಟಯ್ಲರ್ 47 ರನ್ ದಾಖಲಿಸಿದ್ದಾರೆ. ಇದಕ್ಕೂ ಮೊದಲು, ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ 170 ರನ್ ಗಳಿಸಿ ಆಲ್​ ಔಟ್ ಆಗಿತ್ತು. ಆ ಮೂಲಕ 138 ರನ್​ಗಳ ಲೀಡ್ ಪಡೆದುಕೊಂಡಿತ್ತು. ಆದರೆ, ಈ ಮೊತ್ತವನ್ನು ನ್ಯೂಜಿಲ್ಯಾಂಡ್ ಸಮರ್ಥವಾಗಿ ಎದುರಿಸಿದೆ. ಎಲ್ಲಾ ವಿಭಾಗಗಳಲ್ಲಿಯೂ ಉತ್ತಮ ಆಟವಾಡಿ ಟೆಸ್ಟ್ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ತನ್ಮೂಲಕ ಭಾರತದ ಕನಸು ಕಮರಿಹೋಗಿದೆ.

promotions

ಪಂದ್ಯದ ಉದ್ದಕ್ಕೂ ಹವಾಮಾನ ತೊಡಟುಮಾಡಿತ್ತು. ನಾಲ್ಕನೇ ದಿನದಾಟ ಹಾಗೂ ಮೊದಲ ದಿನದಾಟ ಮಳೆಯ ಕಾರಣದಿಂದ ಸಂಪೂರ್ಣ ರದ್ದಾಗಿತ್ತು. ಎರಡನೇ ದಿನ ಮೂರು ಬಾರಿ ಬ್ಯಾಡ್ ಲೈಟ್ ಪಂದ್ಯಕ್ಕೆ ಅಡ್ಡಿಪಡಿಸಿತ್ತು ಹಾಗಾಗಿ ಪಂದ್ಯದ ಎಲ್ಲಾ ನಿರೀಕ್ಷೆಗಳಿಗೂ ಮೀರಿ ಕ್ರಿಕೆಟ್ ಅಭಿಮಾನಿಗಳಿಗೆ ಹವಾಮಾನದ ಅಡ್ಡಿಯಿಲ್ಲದೆ, ಪಂದ್ಯ ನಡೆಯಲಿ ಎಂಬ ಆಶಯವೇ ಹೆಚ್ಚಾಗಿತ್ತು ಅದರಂತೆ ಆರು ದಿನಗಳ ಕಾಲ ನಡೆದ ಟೆಸ್ಟ್ ಇಂದು ಅಂತ್ಯಗೊಂಡಿದೆ.

promotions

Read More Articles