ಬೆಳೆಗಳ ರೋಗ ಹತೋಟಿಗೆ ತರುವಂತೆ ರೈತರ ಒತ್ತಾಯ

ಹೊಸೂರ: ಗ್ರಾಮದಲ್ಲಿ ಬೆಳೆದಂತ ಮುಂಗಾರು ಬೆಳೆಗಳಾದ ಹೆಸರು ಮತ್ತು ಸೋಯಾಅವರೆ ಬೆಳೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹಳದಿ ನಂಜುರೋಗ ಹಾಗೂಪೀಡೆ ಸರ್ವೇಕ್ಷಣಾ ಸಮೀಕ್ಷೆಗಾಗಿ ರೈತರ ಜಮೀನುಗಳಿಗೆ ಮುರಗೋಡ ಕೃಷಿ ಅಧಿಕಾರಿ ನಾಗೇಶ ವಿರಕ್ತಮಠ ಆಗಮಿಸಿ ರೋಗ ಹತೋಟಿ ನಿರ್ವಹಣಾ ಕ್ರಮಗಳನ್ನು ಈ ಕೆಳಗಿನಂತೆ ತಿಳಿಸಿದರು.

promotions

ಹೆಸರು ಬೆಳೆಯು 60-65ದಿವಸಗಳ ಮೊದಲೆ ಈ ರೋಗ ಬಂದರೆ ಇಳುವರಿ ಕುಂಠಿತವಾಗುತ್ತದೆ. ಮುಂಗ್ ಬೀನ್ ಯೆಲ್ಲೊ ಮೊಸಾಯಿಕ್ ವೈರಸ್ ಬೆಮಿಸಿಯಾ ತಬಾಕಿ ಎಂಬ ಬಿಳಿ ನೊಣಗಳ ಮೂಲಕ ಹರಡುತ್ತದೆ. ಈ ರೋಗ ಹೆಸರು, ಉದ್ದು ಹಾಗೂ ಸೋಯಾಅವರೆಯಂತಹ ಬೇಳೆಕಾಳು ಬೆಳೆಗಳಲ್ಲಿ ಕಂಡುಬರುತ್ತದೆ. ರೋಗದ ಪ್ರಾರಂಭದ ಹಂತದಲ್ಲಿ ವೈರಸ್ ಬಾದಿತ ಹಳದಿ ಎಲೆಯ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಹಾಗೂ ಮುಂಜಾಗೃತ ಕ್ರಮವಾಗಿ ತಕ್ಷಣ ಬೆಳೆಗೆ ಪ್ರತಿ ಲೀ ನೀರಿಗೆ 1ಮಿ.ಲೀ ಆಕ್ಸಿಡೆಮಿಟಾನ್ ಮಿಥೈಲ್ 25 ಇ.ಸಿ.ಅಥವಾ ಥೈಮಿಥಾಕ್ಸೈಮ್ 0.25ಗ್ರಾಂ ಮತ್ತು ಮ್ಯಾಗ್ನೇಸಿಯಂ ಸಲ್ಫೇಟ್ 5ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಹತ್ತು ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪರಣೆ ಮಾಡಬೇಕು ಎಂದರು.

promotions

ಈಗಾಗಲೆ ಮೂರಗೋಡ ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಬೆಳಗೆ ಸಿಂಪರಣೆ ಮಾಡಲು ಅವಶ್ಯಕವಿರುವ ಕೀಟನಾಶಕ ಇಮಾಆ್ಯಕ್ಟೀವ್ ಬೆಂಝುವೆಟ್, ಇಮಿಡಾ ಕ್ಲೋಪಿಡ್, ಥೈಯೊಮಿಥಾಕ್ಸೈಮ್+ಲ್ಯಾಮ್ಡಾಸೈಲೊಥ್ರೀನ್ ಹೆಕ್ಸಾಕೊನಾಜೋಲ್, ನೀಮ್ ಆಯಿಲ್ ಮತ್ತು ಎನ್ ಪಿ ಕೆ ಕನ್ಸಾರಸ್ಸಿಯಾ ಹಾಗೂ ಮಿನರಲ್ ಮಿಕ್ಸರ್ ಪುಡಿ ಲಭ್ಯವಿದ್ದು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ , ಮಲ್ಲಿಕಾರ್ಜುನ ಕರಡಿಗುದ್ದಿ ಇದ್ದರು.

Read More Articles