ಹಿಂದೂಸ್ಥಾನ ಎರೋನಾಟಿಕ್ಸನಿಂದ್ ಶಿಶುಕ್ಷು ತರಬೇತಿಗೆ ಅರ್ಜಿ ಆಹ್ವಾನ

ಬಾಗಲಕೋಟೆ: ಬೆಂಗಳೂರಿನ ಹಿಂದೂಸ್ಥಾನ ಎರೋನಾಟಿಕ್ಸ್ ಲಿಮಿಟೆಡ್‍ನವರು ಅಕ್ಟೋಬರ ತಿಂಗಳಲ್ಲಿ ಆರಂಭವಾಗುವ ಶಿಶುಕ್ಷು ತರಬೇತಿಗಾಗಿ ಫಿಟ್ಟರ, ಟರ್ನರ್, ಮಷಿನಿಷ್ಟ್, ಎಲೆಕ್ಟ್ರೀಷಿಯನ್, ವೆಲ್ಡರ, ಕೋಪಾ, ಫೌಂಡ್ರೀಮನ್ ಮತ್ತು ಶೀಟ್ ಮೆಟಲ್ ವರ್ಕರ್ ಟ್ರೇಡಗಳಲ್ಲಿ ಐ.ಟಿ.ಐ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

promotions

ತರಬೇತಿ ಅವಧಿಯಲ್ಲಿ ಸರಕಾರದ ನಿಯಮಾನುಸಾರ ಸ್ಟೈಪಂಡ್ ಮತ್ತು ಇತರೆ ಸೌಲಭ್ಯಗಳೂ ನೀಡಲಾಗುತ್ತದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಸ್.ಎಸ್.ಎಲ್.ಸಿ, ಐ.ಟಿ.ಐ ಅಂಕಪಟ್ಟಿ, ಎನ್.ಟಿ.ಸಿ, ಜಾತಿ ಪ್ರಮಾಣ ಪತ್ರ, ಪಿಡಬ್ಲೂಡಿ ಪ್ರಮಾಣಪತ್ರ, ಆಧಾರ ಕಾರ್ಡ, ಪ್ಯಾನ್‍ಕಾರ್ಡ ಹಾಗೂ ಎನ್‍ಸಿವಿಟಿ ಮಿಸ್ ಪೋರ್ಟಲ್ ನೊಂದಣಿ ಮಾಡಿಸಿದ ಪ್ರತಿ ಹಾಗೂ ಅವುಗಳ ಝರಾಕ್ಸ ಪ್ರತಿ ಮತ್ತು ಒಂದು ಪಾಸ್‍ಪೋರ್ಟ ಸೈಜ್ ಫೋಟೋದೊಂದಿಗೆ ಜುಲೈ 26 ರೊಳಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾಡಳಿತ ಭವನ, ನವನಗರ, ಬಾಗಲಕೋಟೆ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂಸಂ.08354-235337ಗೆ ಸಂಪರ್ಕಿಸಬಹುದಾಗಿದೆ.

promotions

Read More Articles