ದೆಹಲಿ ಹೈಕೋರ್ಟಗೆ ಮಣಿದ ವಾಟ್ಸಆಪ ಹೊಸ ಪಾಲಿಸಿಗೆ ಬ್ರೇಕ್
- 15 Jan 2024 , 12:48 AM
- Delhi
- 161
ಭಾರತದ ದತ್ತಾಂಶ ಸಂರಕ್ಷಣಾ ಕಾನೂನುಗಳು ಜಾರಿಗೆ ಬರುವವರೆಗೆ ವಾಟ್ಸಾಪ್ ತನ್ನ ಹೊಸ ಗೌಪ್ಯತೆ ನೀತಿಯನ್ನು (privacy policy )ಆರಿಸಿಕೊಳ್ಳಲು ಬಳಕೆದಾರರನ್ನು ಒತ್ತಾಯಿಸುವುದಿಲ್ಲ ಎಂದು ವಾಟ್ಸಆಪ್ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ. ಅಲ್ಲಿಯವರೆಗೆ ಈ ಹೊಸ ನಿಯಮಗಳು ಸ್ಥಗಿತಗೊಂಡಿರುತ್ತವೆ ಎಂದು ತಿಳಿಸಿದೆ.

ಹೊಸ ಗೌಪ್ಯತೆ ನೀತಿಗಳನ್ನು ಆರಿಸಿಕೊಳ್ಳದ ಬಳಕೆದಾರರ ವಾಟ್ಸಆಪ ಬಳಕೆಯನ್ನು ಮಿತಿಗೊಳಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠದ ಮುಂದೆ ವಾಟ್ಸಆಪ್ ಸ್ಪಷ್ಟಪಡಿಸಿದೆ.

ಕಳೆದ ತಿಂಗಳು ದೆಹಲಿ ಹೈಕೋರ್ಟ್ ವಾಟ್ಸಾಪ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ ಕಾನೂನು ಲಾಗು ಆಗುವ ಮೊದಲೆ ಹೊಸ ನೀತಿಗಳನ್ನು ಸ್ವೀಕರಿಸಲು ಬಳಕೆದಾರರನ್ನು ಒತ್ತಾಯಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿತ್ತು.










