ಬಿಜೆಪಿ ನಾಯಕನನ್ನು ಸಾಲವಾಗಿ ನೀಡಿ : ಆಸ್ಟ್ರೇಲಿಯಾ...!

  • 14 Jan 2024 , 10:19 PM
  • world
  • 105

ಆಸ್ಟ್ರೇಲಿಯಾದ ಸಂಸತ್ ಸದಸ್ಯ ಕ್ರೇಗ್ ಕೆಲ್ಲಿ ಕೋವಿಡ್ ಸಾಂಕ್ರಾಮಿಕದಲ್ಲಿ ಸೃಷ್ಟಿಯಾದ ಅವ್ಯವಸ್ಥೆಯನ್ನು ಬಗೆಹರಿಸಲು ಎಡ ಬಿಡದೆ ಕೆಲಸ ಮಾಡಿದ ಬಿಜೆಪಿ ನಾಯಕ ಹಾಗು ಉತ್ತರಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥರಿಂದ ಪ್ರಭಾವಿತರಾಗಿ ಯೋಗಿಯವರನ್ನು ಆಸ್ಟ್ರೇಲಿಯಾಕ್ಕೆ ಸಾಲವಾಗಿ ನೀಡಿ ಎಂದು ಭಾರತಕ್ಕೆ ಟ್ವಿಟ್ ಮಾಡುವ ಮೂಲಕ ಬೇಡಿಕೊಂಡಿದ್ದಾರೆ.

promotions

ಏಪ್ರಿಲ್ ಮಧ್ಯದಲ್ಲಿ ಭಾರತವನ್ನು ಅಪ್ಪಳಿಸಿದ ಕೋವಿಡ ಎರಡನೇ ಅಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ಮಾಡಿದ ಕಾರ್ಯಗಳಿಂದ ಪ್ರಶಂಸೆಗೆ ಪಾತ್ರವಾಗಿದೆ.

promotions

ಸಾಂಕ್ರಾಮಿಕ ರೋಗವನ್ನು ತಡೆಹಿಡಿಯಲು ಉತ್ತರ ಪ್ರದೇಶ ಸರ್ಕಾರದ ಯಶಸ್ಸನ್ನು ಗಮನಿಸಿದ ಆಸ್ಟ್ರೇಲಿಯಾದ ಸಂಸತ್ ಸದಸ್ಯ ಕ್ರೇಗ್ ಕೆಲ್ಲಿ, ಅಲೆಯನ್ನು ಹತ್ತಿಕ್ಕುವಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪರಿಣಾಮಕಾರಿ ನಾಯಕತ್ವವನ್ನು ಶ್ಲಾಘಿಸಿದ್ದಾರೆ.

ಕೋವಿಡ್ -19 ನಿರ್ವಹಣೆಯಲ್ಲಿ ಉತ್ತರ ಪ್ರದೇಶದ ಮಾದರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಸ್ಟ್ರೇಲಿಯಾದಲ್ಲಿ ನಾಯಕತ್ವವನ್ನು ವಹಿಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ.

Read More Articles