ಕೋವಿಡ್ ನಲ್ಲಿ ಪ್ರಧಾನಿ ಕಾರ್ಯ ಶ್ಲಾಘನೀಯ: ಸಿದ್ದಗೌಡರ

ಬೈಲಹೊಂಗಲ: ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಜನಸಾಂದ್ರತೆ ಹೊಂದಿದ ಭಾರತದಲ್ಲಿ ಕೊವಿಡ್ ಅಲೆಯನ್ನು ದಿಟ್ಟವಾಗಿ ನಿಭಾಯಿಸಿ ದೇಶವನ್ನು ಮುನ್ನೆಡೆಸುತ್ತಿರುವ ಪ್ರಧಾನಿ ನರೇಂದ್ರ ಮೊದಿಜಿಯವರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಹೇಳಿದರು.

promotions

ಕೇಂದ್ರ ಸರ್ಕಾರ ಕೊವಿಡ್ ಸವಾಲನ್ನು ಸಮರ್ಥವಾಗಿ ಎದುರಿಸಿದ ಸಂದರ್ಭದ ವಿಷಯದ ಮೇಲೆ ಗುರವಾರ ಬೈಲಹೊಂಗಲ ಮಂಡಳದ ವೆಬ್ಬೆಕ್ಸ್ ಸಭೆಯಲ್ಲಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಜಗತ್ತಿನಲ್ಲಿ ಅತ್ಯಂತ ಮುಂದುವರೆದ ರಾಷ್ಟ್ರಗಳು ಕೊವಿಡ್ ಅಲೆ ತಡೆಗಟ್ಟುವಲ್ಲಿ ಹೈರಾಣವಾಗಿ ಸಾಕಷ್ಟು ಜನರ ಸಾವಿಗೆ ಕಾರಣವಾದರೆ, ಭಾರತದಲ್ಲಿ ಅತ್ಯಂತ ಕನಿಷ್ಠ ಸಾವಿನ ಪ್ರಮಾಣದಲ್ಲಿ 3ಕೋಟಿ ಸೋಂಕಿತರಿಗೆ ಆರೋಗ್ಯ ಸೇವೆ ನೀಡಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.

promotions

ದೇಶದಲ್ಲಿ 4ಲಕ್ಷ ಆಮ್ಲಜನಕ ಘಟಕಗಳಿಂದ 11ಲಕ್ಷ ಘಟಕಗಳನ್ನು ಸ್ಥಾಪನೆ, ಸ್ವದೇಶಿಯಾಗಿ ನಿರ್ಮಾಣವಾಗಿರುವ ಕೊವಿಡ್ ವ್ಯಾಕ್ಸಿನ್ ತಯಾರಿಕೆಯನ್ನು ಪ್ರತಿ ತಿಂಗಳಿಗೆ 7ಪಟ್ಟು ಹೆಚ್ಚಿಸುವ ಮೂಲಕ ಬರುವ ಡಿಸೆಂಬರ್ ಒಳಗೆ ಪ್ರತಿಯೊಬ್ಬ ದೇಶದ ಪ್ರಜೆಗೆ ಉಚಿತ ವ್ಯಾಕ್ಸಿನ್ ನೀಡುವ ಸಂಕಲ್ಪಮಾಡಿರೊ ಮೊದಿ ಸರ್ಕಾರಕ್ಕೆ ಈ ಶ್ರೇಯಸ್ಸು ಸಲ್ಲುತ್ತದೆ. ಪಿಎಂ ಕೆರ್ಸ್ ಮೂಲಕ ಕೊವಿಡ್ ದಿಂದ ಅನಾಥವಾದ ಮಕ್ಕಳಿಗೆ 23 ವರ್ಷ ತುಂಬಿದ ನಂತರ 10ಲಕ್ಷರೂಪಾಯಿ ಪರಿಹಾರ ನೀಡಲು ತಗೆದುಕೊಂಡ ಕ್ರಮದಿಂದ ಅನಾಥಮಕ್ಕಳಿಗೆ ಕೇಂದ್ರ ಸರ್ಕಾರ ಆಸರೆಯಾದರೆ ರಾಜ್ಯದಲ್ಲಿ ಕೊವಿಡ್ ದಿಂದ ನಿಧನರಾದ ಬಡ ಕುಟುಂಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಹಾಗೂ ಮೃತ ರೈತರ ಸಾಲ ಮನ್ನಾ ಮಾಡುವ ಮೂಲಕ ದುಃಖದ ಮಡುವಿನಲ್ಲಿದ್ದ ಕೃಷಿಕರಿಗೆ ಬಿ.ಎಸ್.ಯಡಿಯುರಪ್ಪನವರ ಸರ್ಕಾರ ರೈತಪರ ಸರ್ಕಾರ ಎನ್ನುವದನ್ನು ಮತ್ತೊಮ್ಮೆ ಸಾಬಿತು ಪಡಿಸಿದೆ ಎಂದರು.

32 ಕೋಟಿ ಜನಸಂಖ್ಯೆ ಹೊಂದಿದ ಅಮೇರಿಕಾದಂತಹ ದೇಶದಲ್ಲಿ ವ್ಯಾಕ್ಸಿನ್ ಪೊರೈಸಲು ಹೆಣಗಾಡುವಾಗ ಭಾರತದಲ್ಲಿ 34 ಕೋಟಿಗೂ ಹೆಚ್ಚಿನ ಜನರಿಗೆ ಉಚಿತ ವ್ಯಾಕ್ಸಿನ್ ಹಾಕಲಾಗಿದೆ. ಲಾಕ್ ಡೌನ್ ದಿಂದ ತೊಂದರೆ ಅನುಭವಿಸಿದ ತರಕಾರಿ, ಹೂ ಬೆಳೆಗಾರ ರೈತರಿಗೆ ಬೀದಿ ವ್ಯಾಪಾರಿಗಳಿಗೆ ನೇಕಾರರು ಖಾಸಗಿ ಶಿಕ್ಷಕರು ಹಾಗೂ ಇನ್ನು ಕೂಲಿ ಕಾರ್ಮಿಕರಿಗೆ ಧನ ಸಾಹಾಯ ಮಾಡಿದ ರಾಜ್ಯ ಸರ್ಕಾರದ ದಿಟ್ಟು ನಿಲುವಿಗೆ ಪ್ರತಿಯೊಬ್ಬರ ಕೃತಜ್ಞತೆ ಸಲ್ಲಿಸಲೆಬೇಕು ಎಂದರು. ಸಭೆಯಲ್ಲಿ ರಾಜ್ಯ ಮಾಧ್ಯಮ ಸದಸ್ಯರು, ಬೆಳಗಾವಿ ವುಭಾಗ ಮಾಧ್ಯಮ ಉಸ್ತುವಾರಿಗಳಾದ ಸಿದ್ದು ಮೊಗಲಿಶೆಟ್ಟರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ನೀತಿನ ಚೌಗಲೆ, ಮಂಡಲ ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ದೇಸಾಯಿ, ಸಂತೋಷ ಹಡಪದ, ಗೌಡಪ್ಪ ಹೊಸಮನಿ, ನಾಮದೇವ, ತಾಪಂ ಸದಸ್ಯರಾದ ಜಗದೀಶ ಬೂದಿಹಾಳ, ಸುರೇಶ ಮ್ಯಾಕಲ್, ಶಶಿ ಪಾಟೀಲ ಭರಮನಾಯ್ಕ ಮಲ್ಲೂರ, ಮಂಡಲ ಪದಾಧಿಕಾರಿಗಳು, ಶಕ್ತಿ ಕೇಂದ್ರ ಹಾಗೂ ಬೂತ ಪ್ರಮುಖರು ಇದ್ದರು.

Read More Articles