ಮೋದಿ ಸರ್ಕಾರಕ್ಕೆ ತಲೆನೋವಾದ ಪೆಗಾಸಸ ಸ್ಪೈವೆರ್

  • 15 Jan 2024 , 3:13 AM
  • Delhi
  • 131

ದೆಹಲಿ: ಪೆಗಾಸಸ್ ಸ್ಪೈವೇರ್ ಒಂದು ವಾಣಿಜ್ಯ ಕಂಪನಿಯಾಗಿದ್ದು ಕಾಂಟ್ರಾಕ್ಟ್ ಮಾಡಿಕೊಂಡು ಕಾರ್ಯನಿರ್ವಹಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ ಭಾರತೀಯರ್ ಮೇಲೆ "ಕಾರ್ಯಾಚರಣೆ ಮಾಡಲು ಯಾರು ಕಾಂಟ್ರಾಕ್ಟ್ ನೀಡಿದ್ದಾರೆ ಎಂಬ ಅನಿವಾರ್ಯ ಪ್ರಶ್ನೆ ಉದ್ಭವಿಸುತ್ತಿದೆ.ಅದು ಭಾರತ ಸರ್ಕಾರವಲ್ಲದಿದ್ದರೆ, ಯಾರು? ಭಾರತದ ಜನರಿಗೆ ತಿಳಿಸುವುದು ಮೋದಿ ಸರ್ಕಾರದ ಕರ್ತವ್ಯ ಎಂದು ಸುಬ್ರಮಣ್ಯಸ್ವಾಮಿ ಟ್ವಿಟ್ ಮೂಲಕ ಹೇಳಿದ್ದಾರೆ.

promotions

ಏನಿದು ಪೆಗಾಸಸ್ ಸ್ಪೈವೆರ....?
ಪೆಗಾಸಸ್ ಎಂಬುದು ಇಸ್ರೇಲಿ ಕಂಪನಿಯಾದ ಎನ್‌ಎಸ್‌ಒ ಗ್ರೂಪ್ ರಚಿಸಿದ ಸ್ಪೈವೇರ್ ಆಗಿದೆ. ಭದ್ರತಾ ಸಂಶೋಧಕರು ಪೆಗಾಸಸ್ ಅನ್ನು ಸೈಬರ್ ಆಯುಧ ಎಂದು ಕರೆಯುತ್ತಾರೆ.

ಪೆಗಾಸಸನ್ ಹೇಗೆ ಕಾರ್ಯ ನಿರ್ವಹಿಸುತ್ತದೆ...!
ಪೆಗಾಸಸ್ ಸಾಧನವಾಗಿದೆ ಮತ್ತು ಸರ್ಕಾರವು ಯಾರನ್ನಾದರೂ ಕಣ್ಣಿಡಲು ಬಯಸಿದರೆ, ಅದನ್ನು ಬಳಸಬೇಕಾದ ಗೋ-ಟು ಸ್ಪೈವೇರ್ ಆಗಿದೆ. ವಾಟ್ಸಾಪ್‌ನಲ್ಲಿ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳನ್ನು ಸಹ ಪೆಗಾಸಸನಿಂದ್ ಪಡೆಯಬಹುದು . ಮೆಸೇಜ್ ಅಥವಾ ಫೋನ್ ಕರೆಗಳ ಮೂಲಕ ಸ್ಪೈವೇರ್ ಅನ್ನು ಫೋನ್‌ಗೆ ಕಳುಹಿಸುಲಾಗುತ್ತದೆ ಮತ್ತು ಈ ಮಾಲ್‌ವೇರ್ ತಕ್ಷಣವೆ ಫೋನ್‌ನಲ್ಲಿ ಸೇರಿಕೊಳ್ಳುತ್ತದೆ.

ಇಸ್ರೇಲ್ ಮೂಲದ ಎನ್‌ಎಸ್‌ಒ ಗ್ರೂಪ್ ಅಭಿವೃದ್ಧಿಪಡಿಸಿ ಮಾರಾಟ ಮಾಡಲಾಗಿದ ಸ್ಪೈವೇರ್ 300 ಭಾರತೀಯರು ಮತ್ತು ಕನಿಷ್ಠ 37 ಪತ್ರಕರ್ತರ ಹಾಗು 10 ರಾಷ್ಟ್ರೀಯ ಕಾರ್ಯಕರ್ತರ ಫೋನ್‌ಗಳನ್ನು ಕಣ್ಗಾವಲು ಮತ್ತು ಹ್ಯಾಕ್ ಮಾಡಲು ಬಳಸಲಾಗಿದೆ ಎಂದು ಸುದ್ದಿ ಸಂಸ್ಥೆಗಳು ಭಾನುವಾರ ವರದಿ ಮಾಡಿದ್ದವು.

Read More Articles