ಕುಂದಾನಗರಿಯಲ್ಲಿ ಮುಂದುವರೆದ ಕೋರೊನಾ ಕುಣಿತ

ಬೆಳಗಾವಿ: ಮಹಾಮಾರಿ ಕೊರೋನಾ ವೈರಸನ್ ಕುಣಿತ ಕುಂದಾನಗರಿ ಬೆಳಗಾವಿಯಲ್ಲಿ ಮುಂದುವರಿದಿದೆ. ಜಿಲ್ಲೆಯಲ್ಲಿ ಇಂದು ಒಂದೇ ದಿನ 11 ಜನರಿಗೆ ಕೊರೋನಾ ಸೋಂಕು ವಕ್ಕರಿಸಿ ಜನರನ್ನು ಮತಷ್ಟು ಆತಂಕಕ್ಕೆ ದೂಡಿದೆ. ಇಂದು ಒಂದೇ ದಿನ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಐವರು, ಬೆಳಗಾವಿ ನಗರದಲ್ಲಿ ಮೂರು, ಸವದತ್ತಿ ತಾಲೂಕಿನಲ್ಲಿ ಓರ್ವನಿಗೆ ಕೋರೊನಾ ಸೋಂಕು ತಗುಲಿದೆ.

promotions

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 394 ಕ್ಕೆ ಏರಿಕೆಯಾಗಿದೆ. ಇಂದು ದೃಢವಾದ 11 ಜನ ಸೋಂಕಿತರಲ್ಲಿ ರಾಯಬಾಗ ತಾಲೂಕಿನ ಕುಡಚಿ ಮೂಲದ 70 ವರ್ಷದ ವೃದ್ಧ ಹಾಗೂ ವೀರಭದ್ರ ನಗರದ 48 ವರ್ಷದ ನಿನ್ನೆ ವ್ಯಕ್ತಿ ಮೃತಪಟ್ಟಿದ್ದಾರೆ, ಈ ಮೂಲಕ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ 313 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು ಸದ್ಯ ಜಿಲ್ಲೆಯಲ್ಲಿ ಒಟ್ಟು 75 ಸಕ್ರಿಯ ಕೋರೊನಾ ಪ್ರಕರಣಗಳು ಇವೆ.

promotions

 

Read More Articles