8 ವರ್ಷಗಳ ಬಳಿಕ ರಿಓಪನ್ ಆದ್ ನಟಿ ಜಿಯಾ ಖಾನ್ ಸಾವಿನ ಕೇಸ್
- 6 Jan 2024 , 4:34 AM
- Mahashtra
- 328
ಮುಂಬೈ:ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಪ್ರಕರಣ ಎಂಟು ವರ್ಷಗಳ ನಂತರ ಕೇಂದ್ರೀಯ ತನಿಖಾ ನ್ಯಾಯಾಲಯವು ವಿಚಾರಣೆ ನಡೆಸಲು ನಿರ್ಧರಿಸಿದೆ. ಈ ಹಿಂದೆ, ಸೆಷನ್ಸ್ ಕೋರ್ಟ್ ಜಿಯಾರವರ ಮಾಜಿ ಗೆಳೆಯ ಸೂರಜ್ ಪಂಚೋಲಿ ವಿರುದ್ಧ ಮೇಲೆ ವಿಚಾರಣೆ ನಡೆಸುತ್ತಿತ್ತು. ಇ ಪ್ರಕರಣವನ್ನು ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ನ್ಯಾಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ...?
ನಟಿ ಜಿಯಾ ಖಾನ್ ಜೂನ್ 3, 2013 ರಂದು ನಿಧನರಾಗಿದ್ದು ಆಕೆಯು ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಸಾವಿನ ನಿಗೂಡ್ ಪ್ರಕರಣವು ದೀರ್ಘಕಾಲದವರೆಗೆ ಸುದ್ದಿಯಲ್ಲಿತ್ತು ಮತ್ತು ತನಿಖೆಯನ್ನು ಸಿಬಿಐ ನೇತೃತ್ವ ವಹಿಸಿತ್ತು. ಆಕೆಯ ತಾಯಿ ರಬಿಯಾ ಖಾನ್ ಮತ್ತು ಕುಟುಂಬ ಸದಸ್ಯರು ಆಕೆಯನ್ನು ಕೊಲ್ಲಲಾಗಿದೆ ಮತ್ತು ಅವಳು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.











