ಛಾಯಾಗ್ರಾಹಕ ಡ್ಯಾನಿಶ್ ಸಿದ್ದಿಕಿರವರ ಸಾವಿನ ಭಯಾನಕ ಸತ್ಯ ಬಯಲು

  • 9 Jan 2024 , 9:50 AM
  • world
  • 246

ಸುದ್ದಿ ಸಂಸ್ಥೆ ರಾಯಿಟರ್ಸ್‌ನ ಮುಖ್ಯ ಛಾಯಾಗ್ರಾಹಕರಾಗಿ ಕೆಲಸ ಮಾಡುತಿದ್ದ ಭಾರತೀಯ ಪತ್ರಕರ್ತ ಡ್ಯಾನಿಶ್ ಸಿದ್ದಿಕಿ ಅವರ ಕ್ರೂರವಾಗಿ ಹತ್ಯೆಯಾದ ಎರಡು ವಾರಗಳ ನಂತರ, ಮೊದಲ ಬಾರಿಗೆ ವಿವರವಾದ ವೈದ್ಯಕೀಯ ವರದಿ ಛಾಯಾಚಿತ್ರ ಮತ್ತು ಅವರ ಸಾವಿನ ಎಕ್ಸ್-ರೇಯೊಂದಿಗೆ ಸಿಎನ್ಎನ್-ನ್ಯೂಸ್ 18 ( CNN-NEWS 18) ಸುದ್ದಿವಾಹಿನಿ ಬಿಡಿ ಬಿಡಿಯಾಗಿ ವರದಿ ಮಾಡಿದೆ.

promotions

ಸಿದ್ದಿಕಿಯವರ ಬರ್ಬರ ಹತ್ಯೆಯ ನಂತರವೂ ಅವರ ದೇಹವನ್ನು ನಿರ್ದಯವಾಗಿ ಎಳೆಯಲಾಗಿತ್ತು ಮತ್ತು ಅವರ ದೇಹದ ಮೇಲೆ ಭಾರೀ ವಾಹನವನ್ನು ಚಲಾಯಿಸಿ ವಿರೂಪಗೊಳಿಸಲಾಯಿತು ಎಂದು ಸತ್ಯ ಹೊರ ಬಿದ್ದಿದೆ.

promotions

ಅಫಘಾನ್ ಗುಪ್ತಚರ ಮೂಲಗಳ ಪ್ರಕಾರ ಡ್ಯಾನಿಶ್ ಸಿದ್ದಿಕಿ ಅವರ ದೇಹಕ್ಕೆ 12 ಗುಂಡುಗಳು ಹೊಡೆದಿದ್ದವು ಮತ್ತು ಅವೆಲ್ಲವೂ ಸಿದ್ದಿಕಿರವರ ಮುಂಡ ಮತ್ತು ಹಿಂಭಾಗದಲ್ಲಿ ಕಂಡುಬಂದಿದ್ದವು ಎಂದು ತಿಳಿಸಿತ್ತು.

ಕಂದಹಾರ್‌ನಲ್ಲಿ ನಡೆದ ಘರ್ಷನೇ ಮತ್ತು ಡ್ಯಾನಿಶ್ ಸಿದ್ದಿಕಿ ಸಾವಿನ ಬಗ್ಗೆ ತಾಲಿಬಾನಗೆ ಪ್ರಶ್ನಿಸಿದಾಗ ತಾಲಿಬಾನ್ ವಕ್ತಾರರು, "ನಾವು ಆತನನ್ನು ಕೊಲ್ಲಲಿಲ್ಲ. ಅವರು ಶತ್ರು ಪಡೆಗಳೊಂದಿಗೆ ಇದ್ದರು. ಯಾವುದೇ ಪತ್ರಕರ್ತ ಇಲ್ಲಿಗೆ ಬರಬೇಕಾದರೆ, ಅವರು ನಮ್ಮೊಂದಿಗೆ ಮಾತನಾಡಬೇಕು ಎಂದು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು.

Read More Articles